alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಂಟಿ ರೋಡ್ಸ್ ಮಕ್ಕಳೊಂದಿಗೆ ಮಹೇಂದ್ರ ಸಿಂಗ್ ಧೋನಿ

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್, ಭಾರತದ ಮೇಲೆ ಅತೀವ ಅಭಿಮಾನ ಹೊಂದಿದ್ದು, ತಮ್ಮ ಪುತ್ರಿಗೆ “ಇಂಡಿಯಾ” ಎಂದೇ ಹೆಸರಿಟ್ಟಿದ್ದಾರೆ.

ಸದ್ಯ ಕುಟುಂಬದೊಂದಿಗೆ ಭಾರತ ಪ್ರವಾಸದಲ್ಲಿರುವ ಜಾಂಟಿ ರೋಡ್ಸ್ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದಲ್ಲದೆ ಮುಂಬೈನಲ್ಲಿ ದಕ್ಷಿಣ ಭಾರತದ ಆಹಾರವನ್ನು ಸವಿದಿದ್ದಾರೆ. ಈ ಎಲ್ಲದರ ಪೋಟೋಗಳನ್ನು ಜಾಂಟಿ ರೋಡ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಈಗ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರೊಂದಿಗೆ ತಮ್ಮ ಪುತ್ರಿ ಇಂಡಿಯಾ ರೋಡ್ಸ್ ಹಾಗೂ ಪುತ್ರ ನಾಥನ್ ಇರುವ ಪೋಟೋವನ್ನು ಶೇರ್ ಮಾಡಿದ್ದು, ಸೀಮಿತ ಓವರ್ ಗಳ ಪಂದ್ಯವನ್ನಾಡಲು ದಕ್ಷಿಣ ಅಫ್ರಿಕಾಕ್ಕೆ ತೆರಳುತ್ತಿರುವ ಧೋನಿ ತಮ್ಮ ಮಕ್ಕಳಿಂದ ಸಲಹೆ ಪಡೆದಿದ್ದಾರೆಂದು ತಮಾಷೆಯಾಗಿ ಹೇಳಿದ್ದಾರಲ್ಲದೆ ‘ಧನ್ಯವಾದ ಮಾಹಿ’ ಎಂದು ಟ್ವೀಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...