alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿಯನ್ನು ಮಾಲಿನ್ಯ ಮುಕ್ತ ಮಾಡಿ ಎಂದ ವಿರಾಟ್

kohli-smog

ದೆಹಲಿಯಲ್ಲೀಗ ಸರಿಯಾಗಿ ಉಸಿರಾಡೋದೂ ಕಷ್ಟ. ಮನೆಯಿಂದ ಹೊರಬಂದ್ರೆ ಆರೋಗ್ಯ ಹದಗೆಡಬಹುದು ಅನ್ನೋ ಆತಂಕ. ಇನ್ನು ವಾಹನ ಸವಾರರ ಕಷ್ಟವನ್ನ ಕೇಳಲೇಬೇಡಿ. ಮಿತಿಮೀರಿರುವ ವಾಯುಮಾಲಿನ್ಯದಿಂದಾಗಿ ವಾಹನ ಚಲಾಯಿಸೋದು ಸಾಹಸದ ಕೆಲಸವೇ ಸರಿ. ತಮ್ಮ ತವರು ನೆಲದ ಪರಿಸ್ಥಿತಿ ಬಗ್ಗೆ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಜೀವನ ಅತ್ಯಮೂಲ್ಯವಾದದ್ದು, ಪರಿಸರ ನಮ್ಮ ಬದುಕಿನ ಆಸರೆ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ಧಾರಿ. ಪರಿಸರ ಒಬ್ಬ ವ್ಯಕ್ತಿಗಾಗಿಯಾಗಲಿ ಅಥವಾ ಕುಟುಂಬಕ್ಕಾಗಲಿ ಅಲ್ಲ, ಅದು ಮಾನವೀಯತೆ, ಪರಿಸರವನ್ನು ಹಾಳು ಮಾಡಿದ್ರೆ ಅದು ನಮ್ಮ ಭವಿಷ್ಯವನ್ನು ಹಾಳು ಮಾಡಿದಂತೆ ಅಂತಾ ಟ್ವಿಟ್ಟರ್ ಮೂಲಕ ಕಳಕಳಿ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಜನರು ಉಸಿರಾಡಲು ಕಷ್ಟಪಡುತ್ತಿದ್ದಾರೆ, ಕೆಲವರಿಗೆ ಕಣ್ಣು ಮತ್ತು ಗಂಟಲಿನಲ್ಲಿ ತುರಿಕೆ ಕಾಣಿಸಿಕೊಂಡಿದೆ, ಮಕ್ಕಳು ಅಸ್ತಮಾದಿಂದ ಬಳಲುತ್ತಿದ್ದಾರೆ. ಈಗಾಗ್ಲೇ ದೆಹಲಿಯಲ್ಲಿ ನಡೆಯಬೇಕಿದ್ದ 2 ರಣಜಿ ಪಂದ್ಯಗಳು ರದ್ದಾಗಿವೆ. ದಿನೇ ದಿನೇ ವಾಯುಮಾಲಿನ್ಯ ಹೆಚ್ಚುತ್ತಿರುವುದನ್ನು ನೋಡಿ ಆತಂಕಗೊಂಡಿರುವ ಕೊಹ್ಲಿ, ಸಾಮಾಜಿಕ ತಾಣಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ, ದೆಹಲಿಯಲ್ಲಿ ಸ್ವಚ್ಛತೆ ಕಾಪಾಡುವಂತೆ ವಿನಂತಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...