alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಟ್ರೇಲಿಯಾ ಸೋತಿದ್ದಕ್ಕೆ ಇಂಥಾ ಕೆಲಸ ಮಾಡಿದ್ದಾರೆ ಮಾಜಿ ಕ್ರಿಕೆಟರ್ಸ್

ಭಾರತ-ಪಾಕಿಸ್ತಾನ ನಡುವಣ ಕ್ರಿಕೆಟ್ ಪಂದ್ಯದ ನಂತರ ಟಿವಿಗಳು ಪುಡಿ ಪುಡಿಯಾಗೋದು ಕಾಮನ್. ಸೋಲು ಅನುಭವಿಸಿರೋ ತಂಡದ ಅಭಿಮಾನಿಗಳು ಕೋಪದಲ್ಲಿ ಟಿವಿ ಸೆಟ್ ಗಳನ್ನೆಲ್ಲ ಒಡೆದು ಹಾಕ್ತಾರೆ. ಜನಸಾಮಾನ್ಯರು ಹಾಗಿರಲಿ, ಮಾಜಿ ಆಟಗಾರರು ಕೂಡ ಇಂಥದ್ದೇ ಕೆಲಸ ಮಾಡಿದ್ದಾರೆ.

ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಸೋಲು ಅನುಭವಿಸುತ್ತಿದ್ದಂತೆ ಹತಾಶೆಯಿಂದ ಮಾಜಿ ಕ್ರಿಕೆಟಿಗರಾದ ಡೀನ್ ಜೋನ್ಸ್ ಹಾಗೂ ಬ್ರಾಡ್ ಹಾಗ್ ಕಂಪ್ಯೂಟರ್, ಟಿವಿ, ಲ್ಯಾಪ್ಟಾಪ್ ಗಳನ್ನೆಲ್ಲ ಒಡೆದು ಹಾಕಿದ್ದಾರೆ. ಇವರಿಬ್ಬರೂ ಆಸ್ಟ್ರೇಲಿಯಾದ ಮಾಜಿ ಆಟಗಾರರು.

ಕಾಂಗರೂಗಳು ಹೀನಾಯವಾಗಿ ಸೋಲುತ್ತಿದ್ದಂತೆ ಇಬ್ಬರೂ ಕೆರಳಿದ್ದಾರೆ. ಇಂದೋರ್ ನ ಅತುಲ್ ಮಲಿಕ್ರಮ್ ಎಂಬುವವರಿಗೆ ಸೇರಿದ ಕೆಫೆಗೆ ಬಂದಿದ್ದಾರೆ. ಅಲ್ಲಿದ್ದ ಟಿವಿ, ಕಂಪ್ಯೂಟರ್, ಲ್ಯಾಪ್ಟಾಪ್ ಗಳ ಮೇಲೆ ಕೋಪ ತೀರಿಸಿಕೊಂಡಿದ್ದಾರೆ. ಕೆಫೆಯಲ್ಲಿ ಅಭಿಮಾನಿಗಳಿಗೆ ಒಡೆದು ಹಾಕಲೆಂದೇ ಇವುಗಳನ್ನು ಇಟ್ಟಿರಲಾಗುತ್ತದೆ.

ಇದಕ್ಕೆ ಮೊದಲೇ ಗ್ರಾಹಕರಿಂದ ಹಣ ಪಡೆಯಲಾಗುತ್ತದೆ. ಆದ್ರೆ ಡೀನ್ ಜೋನ್ಸ್ ಹಾಗೂ ಬ್ರಾಡ್ ಹಾಗ್ ವಿಶೇಷ ಅತಿಥಿಗಳಾಗಿರೋದ್ರಿಂದ ಈ ನಷ್ಟಕ್ಕೆ ಅವರಿಂದ ಪರಿಹಾರ ಪಡೆದಿಲ್ಲ ಅಂತಾ ಕೆಫೆ ಮಾಲೀಕರು ತಿಳಿಸಿದ್ದಾರೆ. ಗ್ರಾಹಕರಿಗೆ ಒಡೆಯಲೆಂದೇ ಟಿವಿ, ಲ್ಯಾಪ್ಟಾಪ್, ಕಂಪ್ಯೂಟರ್ ಮಾನಿಟರ್, ಗ್ಲಾಸ್, ಕಪ್, ಪ್ಲೇಟ್, ಪಂಚಿಂಗ್ ಬ್ಯಾಗ್ ಎಲ್ಲವನ್ನೂ ಇಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...