alex Certify
ಕನ್ನಡ ದುನಿಯಾ       Mobile App
       

Kannada Duniya

ದಾವೂದ್ ಇಬ್ರಾಹಿಂಗೆ ಪಾಠ ಕಲಿಸಿದ್ದ ಈ ಕ್ರಿಕೆಟಿಗ

indiatv638f69_dawood

ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂನನ್ನು ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಕಿಂಗ್ ಅಂತಾ ಕರೆಯಲಾಗುತ್ತದೆ. ಭೂಗತ ಪಾತಕಿ  ದಾವೂದ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಸೋತ್ರೆ ಕಣ್ಣೀರಿಡ್ತಾ ಇದ್ದ. ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ರಾಜಾರೋಷವಾಗಿ ಪಾಲ್ಗೊಳ್ತಾ ಇದ್ದ ದಾವೂದ್ 1986ರಲ್ಲಿ ಕ್ರಿಕೆಟ್ ಆಟಗಾರರಿಗೆ ವಾಹನ ನೀಡುವ ಆಫರ್ ನೀಡಿದ್ದನಂತೆ. ಈ ವೇಳೆ ಭಾರತೀಯ ಆಟಗಾರರೊಬ್ಬರು ದಾವೂದ್ ಗೆ ಸರಿಯಾಗಿ ಪಾಠ ಕಲಿಸಿದ್ದರಂತೆ.

1986 ರಲ್ಲಿ ಭೂಗತ ಪಾತಕಿ ದಾವೂದ್, ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂಗೆ ಬಂದು, ಕ್ರಿಕೆಟ್ ಆಟಗಾರರಿಗೆ ಆಮಿಷವೊಡ್ಡಿದ್ದ. ಪಾಕಿಸ್ತಾನವನ್ನು ಸೋಲಿಸಿದ್ರೆ ಪ್ರತಿಯೊಬ್ಬ ಆಟಗಾರರಿಗೆ ಕಾರ್ ನೀಡುವುದಾಗಿ ಹೇಳಿದ್ದ. ಆಗಿನ ಕಾಲದಲ್ಲಿ ಫೇಮಸ್ ಆಗಿದ್ದ ಟೋಯೋಟಾ ಕೊರೋಲಾ ನೀಡುವುದಾಗಿ ಹೇಳಿದ್ದ.

ಡ್ರೆಸ್ಸಿಂಗ್ ರೂಂನಲ್ಲಿ ಈ ಬಗ್ಗೆ ಮಾತುಕತೆಯಾಗ್ತಾ ಇರುವ ವೇಳೆ ಪತ್ರಿಕಾ ಗೋಷ್ಠಿ ಮುಗಿಸಿ ಅಲ್ಲಿಗೆ ಬಂದಿದ್ದಾರೆ ಕಪಿಲ್ ದೇವ್. ಮೊದಲು ಮೊಹಮ್ಮದ್ ರನ್ನು ನೋಡಿದ ಕಪಿಲ್, ನೀವು ಹೊರಗೆ ಹೋಗಿ ಎಂದಿದ್ದಾರೆ. ನಂತ್ರ ದಾವೂದ್ ನೋಡಿ, ನೀವು ಯಾರು? ಹೊರಗೆ ಹೋಗಿ ಎಂದಿದ್ದಾರೆ. ಕಪಿಲ್ ಮಾತು ಕೇಳಿ ದಾವೂದ್ ಸುಮ್ಮನೆ ಹೊರ ಹೋಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...