alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲ್ ವಿರೂಪದ ನೋವಿನ ಜೊತೆ ಮಗು ಕಳೆದುಕೊಂಡ ದುಃಖ

ಬಾಲ್ ವಿರೂಪಗೊಳಿಸಿದ ಪ್ರಕರಣದಲ್ಲಿ 12 ತಿಂಗಳು ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್ ಖಾಸಗಿ ಜೀವನದಲ್ಲೂ ಸಂಕಷ್ಟ ಎದುರಿಸುತ್ತಿದ್ದಾರೆ. ಡೇವಿಡ್ ವಾರ್ನರ್ ಹಾಗೂ ಪತ್ನಿ ಕ್ಯಾಂಡಿಸ್ ವಾರ್ನರ್ ತುಂಬಾ ದುಃಖದಲ್ಲಿದ್ದಾರೆ. ಈ ಸಂಗತಿಯನ್ನು ಸ್ವತಃ ಪತ್ನಿ ಕ್ಯಾಂಡಿಸ್ ವಾರ್ನರ್ ಹೇಳಿದ್ದಾರೆ.

ಬಾಲ್ ವಿರೂಪಗೊಳಿಸಿದ ಪ್ರಕರಣದ ಮುಖ್ಯ ಆರೋಪಿ ಡೇವಿಡ್ ವಾರ್ನರ್ ಪತ್ನಿ ಸಂದರ್ಶನವೊಂದರಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ. ಬಾಲ್ ವಿರೂಪ ಪ್ರಕರಣದ ನಂತ್ರ ನನಗೆ ಗರ್ಭಪಾತವಾಗಿದೆ. ವಾರ್ನರ್ ಸುದ್ದಿಗೋಷ್ಠಿ ನಡೆಸಿದ ಒಂದೇ ವಾರದಲ್ಲಿ ಗರ್ಭಪಾತವಾಗಿತ್ತು. ಇದಕ್ಕೆ ಒತ್ತಡ ಹಾಗೂ ಪತಿಯ ಅಪಮಾನ ಕಾರಣ ಎಂದು ಕ್ಯಾಂಡಿಸ್ ಹೇಳಿದ್ದಾರೆ.

ನೋವಿನಲ್ಲಿದ್ದ ನಾನು ಬಾತ್ ರೂಂಗೆ ಹೋದೆ. ಬ್ಲೀಡಿಂಗ್ ಆಗುತ್ತಿರುವುದು ಗೊತ್ತಾಯ್ತು. ನಮ್ಮ ಮಗು ಇನ್ನಿಲ್ಲ ಎಂಬ ಸತ್ಯ ನನಗೆ ಗೊತ್ತಾಯ್ತು. ಬಾತ್ ರೂಂ ಗೆ ಡೇವಿಡ್ ಕರೆದು ಎಲ್ಲ ಸಂಗತಿ ಹೇಳಿದೆ. ಇಬ್ಬರೂ ತಬ್ಬಿ ಅತ್ತಿದ್ದೆವು ಎಂದು ಕ್ಯಾಂಡಿಸ್ ಹೇಳಿದ್ದಾರೆ.

ಬಾಲ್ ವಿರೂಪ ಪ್ರಕರಣದ ನಂತ್ರ ನಾವು ಅವಮಾನ ಎದುರಿಸುತ್ತಿದ್ದೆವು. ತುಂಬಾ ನೋವಾಗಿತ್ತು. ಈ ಘಟನೆಯಿಂದ ಮತ್ತಷ್ಟು ದುಃಖ ಅನುಭವಿಸಿದ್ದೇವೆ. ಇದಾದ ನಂತ್ರ ಧೈರ್ಯ ತಂದುಕೊಂಡಿದ್ದೇವೆ. ಇನ್ಯಾವ ಘಟನೆಗೂ ನಾವು ದುಃಖ ಪಡುವುದಿಲ್ಲವೆಂದು ಕ್ಯಾಂಡಿಸ್ ವಾರ್ನರ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...