alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಪೈರ್ ನಿರ್ಣಯಕ್ಕೆ ಡೇವಿಡ್ ವಾರ್ನರ್ ಗರಂ…!

ಬಾಲ್ ಟ್ಯಾಂಪರಿಂಗ್ ಆರೋಪದಡಿ, ಒಂದು ವರ್ಷ ನಿಷೇಧಕ್ಕೆ ಒಳಪಟ್ಟಿರುವ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಸದ್ಯ ಕೆರಿಬಿಯನ್ ಲೀಗ್ ನಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ಸೇಂಟ್‍ ಲೂಸಿಯಾ ಪರ ಬ್ಯಾಟ್ ಮಾಡುವ ಡೇವಿಡ್, ಇತ್ತೀಚೆಗೆ ನಡೆದ ಪಂದ್ಯದಲ್ಲಿ ಅಂಪೈರ್ ನೀಡಿದ ತಪ್ಪು ನಿರ್ಣಯಕ್ಕೆ ಬಲಿಯಾಗಿದ್ದಾರೆ.

ಗಯಾನಾ ಅಮೆಜಾನ್ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಡೇವಿಡ್, ಆರಂಭಿಕರಾಗಿ ಕಣಕ್ಕೆ ಇಳಿದ್ರು. ವಾರಿಯರ್ಸ್‍ ತಂಡ ಮೊದಲು ಬ್ಯಾಟ್ ಮಾಡಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತ್ತು. 142 ರನ್ ಗುರಿ ಹಿಂಬಾಲಿಸಿದ ಸೇಂಟ್‍ ಲೂಸಿಯಾ ತಂಡದ ಆರಂಭ ಕಳಪೆಯಾಗಿತ್ತು.

ಪಂದ್ಯದ 7ನೇ ಓವರ್ ಬೌಲ್ ಮಾಡಿದ ಇಮ್ರಾನ್ ತಾಹೀರ್ ರ ಎಸೆತವನ್ನು, ರಿವರ್ಸ್ ಸ್ವೀಪ್ ಮಾಡಲು ವಾರ್ನರ್ ಮುಂದಾದ್ರು. ಚೆಂಡು ಗ್ಲೌಸ್ ಗೆ ತಾಗಿಕೊಂಡು ಹೋಯಿತು. ಇಮ್ರಾನ್ ಎಲ್.ಬಿ.ಡಬ್ಲ್ಯೂ.ಗೆ ಮನವಿ ಸಲ್ಲಿಸುತ್ತಿದ್ದಂತೆ ಅಂಪೈರ್ ಔಟ್ ನೀಡಿದ್ರು.

ಚೆಂಡು ಪ್ಯಾಡ್ ಗೆ ಬಡಿಯದೆ ಹೋದ್ರೂ, ಔಟ್ ನೀಡಿದ ನಿರ್ಣಯದ ವಿರುದ್ಧ ಡೇವಿಡ್ ವಾರ್ನರ್ ಧ್ವನಿ ಎತ್ತಿದ್ದರು. ಕೊನೆಗೆ ಒಲ್ಲದ ಮನಸ್ಸಿನಿಂದ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ರು. ಕೆರಿಬಿಯನ್ ಲೀಗ್ ನಲ್ಲಿ ಅಂಪೈರ್ ನೀಡಿದ ತಪ್ಪು ನಿರ್ಣಯ ಚರ್ಚೆಗೆ ಗ್ರಾಸವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...