alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಗಿಫ್ಟ್ ತೋರಿಸೋ ಆತುರದಲ್ಲಿ ಮಹಿಳಾ ಕ್ರಿಕೆಟರ್ ಮಾಡಿದ್ರು ಈ ತಪ್ಪು

ವಿರಾಟ್ ಕೊಹ್ಲಿ ಎಂದ್ರೆ ಹುಡುಗಿಯರು ಸಾಯ್ತಾರೆ. ವಿರಾಟ್ ಹುಚ್ಚು ಅಭಿಮಾನಿಗಳ ಸಂಖ್ಯೆ ಸಾಕಷ್ಟಿದೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಕೇವಲ ಹೊರಗಿನವರು ಮಾತ್ರವಲ್ಲ ಕ್ರಿಕೆಟ್ ಜಗತ್ತಿನಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಅದ್ರಲ್ಲಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಮುಂದಿದ್ದಾರೆ.

ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾತ್, ಕೊಹ್ಲಿಯ ದೊಡ್ಡ ಅಭಿಮಾನಿ. ಈ ಹಿಂದೆ ಟ್ವಿಟರ್ ನಲ್ಲಿ ನನ್ನನ್ನು ಮದುವೆಯಾಗ್ತಿಯಾ ಎಂದು ಕೇಳಿದ್ರು ಡೇನಿಯಲ್. ಅಲ್ಲಿಂದ ಸುದ್ದಿಗೆ ಬಂದಿದ್ದ ಡೇನಿಯಲ್ ಆಗಾಗ ಕೊಹ್ಲಿಯನ್ನು ಹೊಗಳಿ ಟ್ವಿಟ್ ಮಾಡ್ತಾರೆ.

2014ರಲ್ಲಿ ಡೇನಿಯಲ್ ಕೊಹ್ಲಿಯನ್ನು ಭೇಟಿಯಾಗಿದ್ದರು. ಇಬ್ಬರು ಸಾಕಷ್ಟು ಮಾತನಾಡಿದ್ದರು. ಈ ವೇಳೆ ಕೊಹ್ಲಿ ತಮ್ಮ ಬ್ಯಾಟನ್ನು ಡೇನಿಯಲ್ ಗೆ ಗಿಫ್ಟ್ ಆಗಿ ನೀಡಿದ್ದರು. ಆ ಬ್ಯಾಟ್ ಫೋಟೋವನ್ನು ಟ್ವೀಟರ್ ಗೆ ಹಾಕಿರುವ ಡೇನಿಯಲ್ ಈ ವಾರ ಮೈದಾನಕ್ಕೆ ವಾಪಸ್ ಬರ್ತಿದ್ದೇನೆ. ಕೊಹ್ಲಿ ಬ್ಯಾಟ್ ನಲ್ಲಿ ಆಡಲು ಕಾತರಳಾಗಿದ್ದೇನೆಂದು ಟ್ವಿಟ್ ಮಾಡಿದ್ದಾರೆ.

ಬ್ಯಾಟ್ ಮೇಲೆ ಡೇನಿಯಲ್ ವಿರಾಟ್ ಕೊಹ್ಲಿ ಹೆಸರು ಬರೆದಿದ್ದಾರೆ. ಆದ್ರೆ ಕೊಹ್ಲಿ ಸ್ಪೆಲ್ಲಿಂಗ್ ತಪ್ಪು ಬರೆದಿದ್ದಾರೆ. Virat Kohli  ಬದಲು Virat Kholi ಎಂದು ಬರೆದಿದ್ದಾರೆ ಡೇನಿಯಲ್. ಈ ಅವಕಾಶವನ್ನು ಟ್ವೀಟರ್ ಬಳಕೆದಾರರು ಬಿಡ್ತಾರಾ? ಡೇನಿಯಲ್ ಸ್ಪೆಲ್ಲಿಂಗ್ ಮಿಸ್ಟೇಕ್ ಹಿಡಿದುಕೊಂಡು ತಮಾಷೆ ಮಾಡಲು ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...