alex Certify
ಕನ್ನಡ ದುನಿಯಾ       Mobile App
       

Kannada Duniya

ಗೀತಾ ಪೋಗತ್ ಗೆ ಅಮೀರ್ ನೀಡುತ್ತಿದ್ದಾರೆ ವಿಶೇಷ ಉಡುಗೊರೆ

aamir-khan-geeta-wedding-gift-759ಬಾಲಿವುಡ್ ಮಿಸ್ಟರ್ ಪರ್ಫಕ್ಷನಿಸ್ಟ್ ಅಮೀರ್ ಖಾನ್, ತಮ್ಮ ಮುಂಬರುವ ‘ದಂಗಲ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಖ್ಯಾತ ಕುಸ್ತಿ ಪಟು ಮಹಾವೀರ್ ಸಿಂಗ್ ಪೋಗತ್ ಅವರ ಜೀವನಾಧರಿತ ಚಿತ್ರವಾಗಿರುವ ‘ದಂಗಲ್’ ನಲ್ಲಿ ಅಮೀರ್ ಖಾನ್ ಮಹಾವೀರ್ ಸಿಂಗ್ ಅವರ ಪಾತ್ರ ನಿರ್ವಹಿಸುತ್ತಿದ್ದಾರೆ.

ಮಹಾವೀರ್ ಸಿಂಗ್ ಅವರ ಮಕ್ಕಳಾದ ಗೀತಾ ಪೋಗತ್ ಹಾಗೂ ಬಬಿತಾ ಸಹ ಕುಸ್ತಿಪಟುಗಳಾಗಿದ್ದು, ಅವರುಗಳ ಪಾತ್ರವೂ ‘ದಂಗಲ್’ ಚಿತ್ರದಲ್ಲಿದೆ. ‘ದಂಗಲ್’ ಚಿತ್ರಕ್ಕಾಗಿ ಹಲವು ಬಾರಿ ಮಹಾವೀರ್ ಸಿಂಗ್ ರನ್ನು ಭೇಟಿಯಾಗಿದ್ದ ಅಮೀರ್ ಖಾನ್, ಸಹಜವಾಗಿಯೇ ಅವರ ಕುಟುಂಬಕ್ಕೂ ಅತ್ಮೀಯರಾಗಿದ್ದರು.

ಇದೀಗ ಗೀತಾ ಪೋಗತ್ ರ ವಿವಾಹ ನವೆಂಬರ್ 20 ರಂದು ಹರಿಯಾಣದ ಬಲಾಲಿ ಗ್ರಾಮದಲ್ಲಿ ನಡೆಯಲಿದ್ದು, ಮೂರು ದಿನ ಮುಂಚಿತವಾಗಿಯೇ ಅಲ್ಲಿಗೆ ತೆರಳಲಿರುವ ಅಮೀರ್ ಖಾನ್ ಮದುವೆ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆನ್ನಲಾಗಿದೆ. ಅಲ್ಲದೇ ಗೀತಾರನ್ನು ತಮ್ಮ ಮಗಳ ಸಮಾನವೆಂದು ಪರಿಗಣಿಸಿರುವ ಅಮೀರ್ ಖಾನ್, ವಿವಾಹ ಸಂದರ್ಭದಲ್ಲಿ ಆಕೆ ಧರಿಸುವ ಉಡುಗೆಯನ್ನು ಸ್ವತಃ ತಾವೇ ಆರಿಸಿದ್ದಾರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...