alex Certify
ಕನ್ನಡ ದುನಿಯಾ       Mobile App
       

Kannada Duniya

ನಿಯಮ ಉಲ್ಲಂಘಿಸಿ ಕ್ರೀಡಾ ಗ್ರಾಮದಿಂದ ಹೊರ ಬಿದ್ದ ಭಾರತೀಯ ಅಥ್ಲೀಟ್ಸ್

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತ ಪದಕ ಬೇಟೆ ಮುಂದುವರಿಸಿದೆ. ಈ ನಡುವೆ ದೇಶಕ್ಕೆ ಮುಜುಗರ ತರುವಂತಹ ಘಟನೆಯೊಂದು ನಡೆದಿದೆ. ಟ್ರಿಪಲ್ ಜಂಪರ್ ರಾಕೇಶ್ ಬಾಬು ಹಾಗೂ ರೇಸ್ ವಾಕರ್ ಕೆ.ಟಿ. ಇರ್ಫಾನ್ ರನ್ನು ಕ್ರೀಡಾಗ್ರಾಮದಿಂದ ಹೊರಹಾಕಲಾಗಿದೆ.

ಕ್ರೀಡಾಗ್ರಾಮದಲ್ಲಿ ಸೂಜಿ ಬಳಸಬಾರದೆಂಬ ನಿಯಮವಿದೆ. ಆದ್ರೆ ಇದನ್ನು ರಾಕೇಶ್ ಹಾಗೂ ಇರ್ಫಾನ್ ಉಲ್ಲಂಘಿಸಿದ್ದು, ಅವರನ್ನು ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ ಹೊರಹಾಕಿದೆ. ಇಬ್ಬರೂ ಭಾರತಕ್ಕೆ ಮರಳಲಿದ್ದಾರೆ. ಇಂದು ನಡೆಯಲಿರುವ ಟ್ರಿಪಲ್ ಜಂಪಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ರಾಕೇಶ್ ಗೆ ಕೈತಪ್ಪಿದೆ.

ಎರಡು ವಾರಗಳ ಹಿಂದಷ್ಟೆ ಭಾರತದ ಬಾಕ್ಸರ್ ಗಳು ಡೋಪಿಂಗ್ ಆರೋಪಕ್ಕೆ ತುತ್ತಾಗಿದ್ದರು. ಕ್ರೀಡಾ ಗ್ರಾಮದಲ್ಲಿರುವ ಬಾಕ್ಸರ್ ಗಳ ಕೋಣೆಯ ಹೊರಭಾಗದಲ್ಲಿ ಬಳಸಿದ ಸಿರಿಂಜ್ ಗಳು ಪತ್ತೆಯಾಗಿದ್ದವು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...