alex Certify
ಕನ್ನಡ ದುನಿಯಾ       Mobile App
       

Kannada Duniya

IPL: ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಚೆನ್ನೈಗೆ ರೋಚಕ ಜಯ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್(IPL) ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 1 ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸುವುದರೊಂದಿಗೆ ಭರ್ಜರಿಯಾಗಿ ಕಂ ಬ್ಯಾಕ್ ಮಾಡಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಂ.ಎಸ್. ಧೋನಿ ಬಳಗ ಗೆಲುವು ಕಂಡಿದ್ದು, 2 ವರ್ಷ ನಿಷೇಧದ ಬಳಿಕ ಭರ್ಜರಿ ಎಂಟ್ರಿ ಕೊಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.

166 ಗೆಲುವಿನ ಗುರಿ ಪಡೆದ ಚೆನ್ನೈ 85 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 16.3 ಓವರ್ ಗಳಲ್ಲಿ 118 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದ್ದ ಚೆನ್ನೈ ತಂಡವನ್ನು ಪಾರು ಮಾಡಿದ್ದು, ಡ್ವೇನ್ ಬ್ರಾವೋ.

30 ಎಸೆತಗಳಲ್ಲಿ 7 ಸಿಕ್ಸರ್, 3 ಬೌಂಡರಿ ಗಳಿಸಿದ ಬ್ರಾವೋ 68 ರನ್ ಗಳಿಸಿದರು. ಕೊನೆ ಓವರ್ ನಲ್ಲಿ ಕೇದಾರ್ ಜಾಧವ್ ಸಿಕ್ಸರ್ ಸಿಡಿಸಿದರು. ಇನ್ನೂ 1 ಎಸೆತ ಬಾಕಿ ಇರುವಾಗಲೇ ಚೆನ್ನೈಗೆ ಗೆಲುವು ತಂದು ಕೊಟ್ಟರು. 19.5 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿದ ಚೆನ್ನೈ ತಂಡ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...