alex Certify
ಕನ್ನಡ ದುನಿಯಾ       Mobile App
       

Kannada Duniya

‘ಪಾಂಡ್ಯ ಔಟ್ ಮಾಡಿದ ಜಡೇಜಾಗೆ ಕೊಹ್ಲಿ ಹೊಡೀತಾರೆ..!’

india_vs_pakistan_match_1497941795_749x421

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಹೀನಾಯ ಸೋಲುಂಡಿದೆ. ಭಾರತೀಯರು ಇನ್ನೂ ಈ ನೋವಿನಿಂದ ಹೊರ ಬಂದಿಲ್ಲ. ಪಾಕಿಸ್ತಾನದ ವಿರುದ್ಧ ಭಾರತ ಸೋಲುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಭಾರತ ಸೋಲುವ ಮೊದಲು ಅಂದ್ರೆ ಹಾರ್ದಿಕ್ ಪಾಂಡ್ಯ ಔಟ್ ಆಗ್ತಾ ಇದ್ದಂತೆ ಬಾಲಕನೊಬ್ಬ ಅಳುವ ವಿಡಿಯೋ ಇದಾಗಿದೆ.

ವಿಡಿಯೋದಲ್ಲಿರುವ ಬಾಲಕನ ಹೆಸರು ಆದಿ. ಹಾರ್ದಿಕ್ ಪಾಂಡ್ಯ ರನ್ ಔಟ್ ಆಗ್ತಾ ಇದ್ದಂತೆ ಬಾಲಕ ಅಳಲು ಶುರುಮಾಡಿದ್ದಾನೆ. ಜಡೇಜಾ, ಪಾಂಡ್ಯರನ್ನು ಔಟ್ ಮಾಡಿದ್ದಾರೆ. ಭಾರತದ 8 ವಿಕೆಟ್ ಈಗ್ಲೇ ಬಿದ್ದಿದೆ. ಇನ್ನು ಇಂಡಿಯಾ ಹೇಗೆ ಗೆಲ್ಲುತ್ತೆ ಎನ್ನುತ್ತ ಕಣ್ಣೀರು ಹಾಕಿದ್ದಾನೆ ಬಾಲಕ.

ಈ ವೇಳೆ ಆದಿ ತಮ್ಮ ಅಣ್ಣನನ್ನು ಸಮಾಧಾನ ಮಾಡಲು ಯತ್ನಿಸ್ತಾನೆ. ನೀನು ಅಳಬೇಡ. ಹಾರ್ದಿಕ್ ಪಾಂಡ್ಯ ಹೋಗಿ ವಿರಾಟ್ ಕೊಹ್ಲಿಗೆ ಹೇಳ್ತಾರೆ. ಆಗ ಕೊಹ್ಲಿ ಜಡೇಜಾಗೆ ಹೊಡೆಯುತ್ತಾರೆ ಎನ್ನುತ್ತಾನೆ. ಆದ್ರೂ ಬಾಲಕ ಅಳೋದನ್ನು ನಿಲ್ಲಿಸೋದಿಲ್ಲ. ಜಡೇಜಾ, ಹಾರ್ದಿಕ್ ಪಾಂಡ್ಯರನ್ನು ಏಕೆ ಔಟ್ ಮಾಡಿದ ಎಂಬುದೊಂದೇ ಆದಿ ಪ್ರಶ್ನೆಯಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...