alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಫಾ ಫೈನಲ್ ನೋಡಲು 2 ಸಾವಿರ ಕಿಲೋಮೀಟರ್ ಕಾರಿನಲ್ಲಿ ಬಂದ್ರೂ ನಿರಾಸೆ

ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ನಾಲ್ವರು ಸ್ನೇಹಿತರು ಎಲ್ಲರ ಗಮನ ಸೆಳೆದಿದ್ದಾರೆ. ಫಿಫಾ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆ ಮಾಡಲು ಕ್ರೊಯೇಷಿಯಾದ ನಾಲ್ವರು ಅಭಿಮಾನಿಗಳು ರಷ್ಯಾಕ್ಕೆ ಕಾರಿನಲ್ಲಿ ಬಂದಿದ್ದಾರೆ. ನಾಲ್ಕು ಸಾವಿರ ಕಿಲೋಮೀಟರ್ ಕಾರಿನಲ್ಲಿ ಬಂದ ಅಭಿಮಾನಿಗಳು ಎಲ್ಲರ ಗಮನ ಸೆಳೆದಿದ್ದಾರೆ.

ಕಷ್ಟಪಟ್ಟು ರಷ್ಯಾಗೇನೋ ಬಂದಿದ್ದಾರೆ ಆದ್ರೆ ಪಂದ್ಯ ವೀಕ್ಷಣೆ ಸಾಧ್ಯವಿಲ್ಲ. ಈಗಾಗಲೇ ಎಲ್ಲ ಟಿಕೆಟ್ ಬುಕ್ ಆಗಿದೆ. ಪ್ರತಿ ಟಿಕೆಟ್ ಬೆಲೆ 2 ಸಾವಿರ ಡಾಲರ್. ಇವ್ರಿಗೆ ಟಿಕೆಟ್ ಸಿಕ್ಕರೂ 8 ಸಾವಿರ ಡಾಲರ್ ಖರ್ಚು ಮಾಡಬೇಕು. ಪಂದ್ಯ ವೀಕ್ಷಿಸಿ 8 ಸಾವಿರ ಡಾಲರ್ ಖರ್ಚು ಮಾಡುವ ಬದಲು ಒಂದು ಕಾರು ಖರೀದಿ ಮಾಡುತ್ತೇವೆ ಎನ್ನುತ್ತಾರೆ ಈ ಅಭಿಮಾನಿಗಳು.

ಕ್ರೊಯೇಷಿಯಾ ಕ್ವಾಟರ್ ಫೈನಲ್ ನಲ್ಲಿ ಜಯ ಗಳಿಸುತ್ತಿದ್ದಂತೆ ರಷ್ಯಾಗೆ ಬರುವ ಪ್ಲಾನ್ ಮಾಡಿದ್ರು ಸ್ನೇಹಿತರು. ಕಾರಿನಲ್ಲಿ 2 ಸಾವಿರ ಕಿಲೋಮೀಟರ್ ಪ್ರಯಾಣ ಬೆಳೆಸಿದ್ರು. ಆದ್ರೆ ಉಕ್ರೇನಿಯಾ ಮೂಲಕ ರಷ್ಯಾ ಪ್ರವೇಶ ನಿಷಿದ್ಧವಾಗಿದ್ದರಿಂದ ಅವ್ರ ಕನಸು ಈಡೇರಲಿಲ್ಲ. ಹಾಗಾಗಿ ವಾಪಸ್ 2 ಸಾವಿರ ಕಿಲೋಮೀಟರ್ ಪ್ರಯಾಣ ಬೆಳೆಸಿ ಕ್ರೊಯೇಷಿಯಾಗೆ ವಾಪಸ್ ಹೋಗಿದ್ದರು.

ಕ್ರೊಯೇಷಿಯಾ ಸೆಮಿಫೈನಲ್ ನಲ್ಲಿ ಗೆಲುವು ಸಾಧಿಸುತ್ತಿದ್ದಂತೆ ನಾಲ್ವರ ಆಸೆ ಮತ್ತೆ ಚಿಗುರಿತ್ತು. ಕ್ರೊಯೇಷಿಯಾದಿಂದ ವಿಮಾನವೇರಿ ರಷ್ಯಾಗೆ ಬಂದ್ರು. ಆದ್ರೆ ಟಿಕೆಟ್ ಬೆಲೆ ಅಭಿಮಾನಿಗಳನ್ನು ನಿರಾಸೆಗೊಳಿಸಿದೆ. ಸುಮಾರು 5.5 ಲಕ್ಷ ರೂಪಾಯಿ ನೀಡಿ ಟಿಕೆಟ್ ಖರೀದಿ ಮಾಡುವ ಬದಲು ಕಾರು ಖರೀದಿ ಮಾಡಬಹುದು ಎನ್ನುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...