alex Certify
ಕನ್ನಡ ದುನಿಯಾ       Mobile App
       

Kannada Duniya

ರೊನಾಲ್ಡೋಗೆ ಒಲಿದ ‘ಫಿಫಾ ವರ್ಷದ ಆಟಗಾರ’ ಪ್ರಶಸ್ತಿ

ro

ಜನಪ್ರಿಯ ಫುಟ್ಬಾಲ್ ತಾರೆ, ಪೋರ್ಚುಗಲ್ ತಂಡದ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೋಗೆ ಪ್ರತಿಷ್ಠಿತ ‘ಫಿಫಾ ವರ್ಷದ ಆಟಗಾರ’ ಪ್ರಶಸ್ತಿ ಒಲಿದಿದೆ.

ಲಿಯೋನಲ್ ಮೆಸ್ಸಿಯಂತಹ ಅದ್ಭುತ ಆಟಗಾರರನ್ನು ಹಿಂದಿಕ್ಕಿದ 31ರ ಹರೆಯದ ರೊನಾಲ್ಡೋ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. 12 ಪಂದ್ಯಗಳಲ್ಲಿ 16 ಗೋಲ್ ಬಾರಿಸಿರುವ ರೊನಾಲ್ಡೋ ಪೋರ್ಚುಗಲ್ ದೇಶದ ಅತ್ಯುನ್ನತ ಗೌರವವಾದ  Ballon d’Or ಪ್ರಶಸ್ತಿಗೂ ಭಾಜನರಾಗಿದ್ದಾರೆ.

EURO-2016ನಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟ ಕೀರ್ತಿ ಕೂಡ ರೊನಾಲ್ಡೋಗೆ ಸಂದಿದೆ. ಜುರಿಚ್ ನಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಜಿಯಾನ್ನಿ ಇನ್ಫಾಂಟಿನೋ ಅವರಿಂದ ‘ಫಿಫಾ ವರ್ಷದ ಆಟಗಾರ’ ಪ್ರಶಸ್ತಿ ಸ್ವೀಕರಿಸಿದ ಕ್ರಿಸ್ಟಿಯಾನೊ ರೊನಾಲ್ಡೋ, 2016 ತಮ್ಮ ಪಾಲಿಗೆ ಅತ್ಯಂತ ಯಶಸ್ವಿ ವರ್ಷ ಅಂತಾ ಹೇಳಿದ್ದಾರೆ. ವೈಯಕ್ತಿಕ ಸಾಧನೆಯ ಜೊತೆಗೆ ತಂಡ ಕೂಡ ಗೆಲುವಿನ ಹಾದಿಯಲ್ಲಿ ಸಾಗಿರೋದು ಅತ್ಯಂತ ಖುಷಿಕೊಟ್ಟಿದೆ ಅಂತಾ ಹೇಳಿದ್ದಾರೆ. ಅಮೆರಿಕದ ಕಾರ್ಲಿ ಲೊಯ್ಡ್ ‘ಫಿಫಾ ವರ್ಷದ ಮಹಿಳಾ ಆಟಗಾರ್ತಿ’ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...