alex Certify
ಕನ್ನಡ ದುನಿಯಾ       Mobile App
       

Kannada Duniya

ವರದಿಗಾರನ ಮೈಕ್ ಕಿತ್ತೆಸೆದ ರೋನಾಲ್ಡೋ; ಕಾರಣ ಗೊತ್ತಾ..?

watch-cristiano-ronaldo-throwing mikeಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಹೊಸದೊಂದು ವಿವಾದವನ್ನು ಸೃಷ್ಟಿಸಿಕೊಂಡಿದ್ದಾರೆ. ತಮ್ಮ ಪ್ರತಿಕ್ರಿಯೆ ಕೇಳಲು ಬಂದ ಟಿವಿ ವರದಿಗಾರನೊಬ್ಬನ ಮೈಕ್ ಕಿತ್ತುಕೊಂಡು ಪಕ್ಕದಲ್ಲಿದ್ದ ಸರೋವರಕ್ಕೆ ಎಸೆದಿದ್ದಾರೆ.

ಪೋರ್ಚ್ ಗೀಸ್ ನ Correio da Manha ಪತ್ರಿಕೆ ಒಡೆತನದಲ್ಲಿರುವ ಟಿವಿ ಚಾನೆಲ್ ವರದಿಗಾರ ರೋನಾಲ್ಡೋ ತಮ್ಮ ತಂಡದ ಸಹ ಆಟಗಾರರ ಜೊತೆ ಬೆಳಗಿನ ವಾಕ್ ಮಾಡುತ್ತಿದ್ದ ವೇಳೆ ಫುಟ್ಬಾಲ್ ಪಂದ್ಯದ ಕುರಿತು ಪ್ರತಿಕ್ರಿಯೆ ಕೇಳಲು ಮುಂದಾಗಿದ್ದಾನೆ.

ಆತ ತಮ್ಮೆದುರು ಮೈಕ್ ಹಿಡಿಯುತ್ತಿದ್ದಂತೆಯೇ ಏನೊಂದು ಮಾತನಾಡದ ಕ್ರಿಸ್ಟಿಯಾನೋ ರೋನಾಲ್ಡೋ, ಆತನ ಕೈಯ್ಯಲ್ಲಿದ್ದ ಮೈಕ್ ಕಿತ್ತುಕೊಂಡು ಪಕ್ಕದಲ್ಲಿದ್ದ ಸರೋವರಕ್ಕೆ ಎಸೆದು ವಾಕಿಂಗ್ ಮುಂದುವರೆಸಿದ್ದಾರೆ. ಟಿವಿ ವರದಿಗಾರನನ್ನು ಅಂಗರಕ್ಷಕರು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ.

Correio da Manha ಪತ್ರಿಕೆ, ಈ ಹಿಂದೆ ಕ್ರಿಸ್ಟಿಯಾನೋ ರೋನಾಲ್ಡೋ ಖಾಸಗಿ ಬದುಕಿನ ಕುರಿತು ಸವಿಸ್ತಾರವಾದ ವರದಿ ಮಾಡಿತ್ತಂತೆ. ಇದನ್ನು ಮನದಲ್ಲಿಟ್ಟುಕೊಂಡಿದ್ದ ರೋನಾಲ್ಡೋ, ವರದಿಗಾರ ಪ್ರತಿಕ್ರಿಯೆ ಕೇಳಲು ಬಂದ ವೇಳೆ ಈ ರೀತಿ ತಮ್ಮ ಆಕ್ರೋಶ ತೀರಿಸಿಕೊಂಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...