alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಯಾವಾಗ ಎಂಬ ಪ್ರಶ್ನೆಗೆ ಯುವರಾಜ್ ಹೇಳಿದ್ರು..

cbu-lg9ucaabhlu

ಕ್ರಿಕೆಟಿಗ ಯುವರಾಜ್ ಸಿಂಗ್ ಯಾವಾಗ ಮದುವೆಯಾಗ್ತಾರೆ ಎಂಬ ಪ್ರಶ್ನೆ ಎಲ್ಲ ಅಭಿಮಾನಿಗಳನ್ನೂ ಕಾಡ್ತಾ ಇದೆ. ಈ ಬಗ್ಗೆ ವರದಿಗಾರರು ಯುವಿಗೆ ಪ್ರಶ್ನೆ ಕೇಳಿದ್ದಾರೆ. ಆದ್ರೆ ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಪ್ರೇಯಸಿ ಹ್ಯಾಝೆಲ್ ಗೆ ಹಸ್ತಾಂತರಿಸಿದ್ದಾರೆ ಯುವಿ.

ಬಜಾರ್ ಬ್ರೈಡ್ ಎಂಬ ನಿಯತಕಾಲಿಕೆಯ ಎರಡನೇ ವಾರ್ಷಿಕೋತ್ಸವದಲ್ಲಿ ಯುವರಾಜ್ ಹಾಗೂ ನಟಿ ಹ್ಯಾಝೆಲ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ಯುವಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಹ್ಯಾಝೆಲ್. ವರದಿಗಾರರ ಪ್ರಶ್ನೆಗೆ ಉತ್ತರ ನೀಡ್ತಾ ಇದ್ದರು ಹ್ಯಾಝೆಲ್. ಈ ವೇಳೆ ಹ್ಯಾಝೆಲ್ ಹಿಂದೆ ನಿಂತಿದ್ದ ಯುವಿ ಮುಖ ಸೊಟ್ಟಗೆ ಮಾಡ್ತಿದ್ದರು. ಯಾವಾಗ ಇದು ಹ್ಯಾಝೆಲ್ ಗೆ ತಿಳಿಯಿತೋ ಆಗ ವಿಡಿಯೋ ಟ್ವಿಟರ್ ಮಾಡುತ್ತ ಹ್ಯಾಝೆಲ್ ಕ್ಲಾಸ್ ತೆಗೆದುಕೊಂಡರು. ಎಕ್ಸ್ ಕ್ಯೂಸ್ ಮಿ, ನನಗೆ ಗೊತ್ತಿರಲಿಲ್ಲ, ನೀವು ನನ್ನ ಹಿಂದೆ ನಿಂತು ಮುಖ ಸೊಟ್ಟಗೆ ಮಾಡ್ತಿದ್ದೀರಾ ಎಂಬುದು ಎಂದಿದ್ದಾರೆ.

ಇಷ್ಟೇ ಅಲ್ಲ, ಇದೇ ಸಮಯದಲ್ಲಿ ಯುವಿಗೆ ನಿಮ್ಮ ಮದುವೆ ಯಾವಾಗ ಎಂದು ವರದಿಗಾರರು ಕೇಳಿದ್ದಾರೆ. ಆಗ ಯುವಿ, ಹ್ಯಾಝೆಲ್ ಕಡೆ ನೋಡಿದ್ದಲ್ಲದೆ, ಯಾವಾಗ ಆಗ್ತಿದ್ದೀರಾ ಎಂದು ಹ್ಯಾಝೆಲ್ ಗೆ ಕೇಳಿದ್ದಾರೆ. ಈ ಪ್ರಶ್ನೆಗೆ ಹ್ಯಾಝೆಲ್ ಅಮ್ಮನನ್ನು ಕೇಳ್ತೇನೆ ಎಂದಿದ್ದಾರೆ. ನಂತರ ಯುವರಾಜ್ ಕೂಡ ತಾವಿಬ್ಬರು ಅಪ್ಪ-ಅಮ್ಮನ ಜೊತೆ ಮಾತನಾಡುತ್ತೇವೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...