alex Certify
ಕನ್ನಡ ದುನಿಯಾ       Mobile App
       

Kannada Duniya

ಮೋಸಗಾರರಂತೆ ಮೊಹಮ್ಮದ್ ಶಮಿ: ಫೇಸ್ಬುಕ್ ನಲ್ಲಿ ಸಾಕ್ಷಿ ನೀಡಿದ ಹಸೀನ್

ಇಂಗ್ಲೆಂಡ್ ಪ್ರವಾಸದಲ್ಲಿರುವ ಕ್ರಿಕೆಟರ್ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಮತ್ತೊಂದು ಆರೋಪ ಮಾಡಿದ್ದಾರೆ. ಹಸೀನ್ ತಮ್ಮ ಫೇಸ್ಬುಕ್ ಅಕೌಂಟ್ ನಲ್ಲಿ ಮೊಹಮ್ಮದ್ ಶಮಿಯ ಎರಡು ಮಾರ್ಕ್ಸ್ ಶೀಟ್, ವೋಟರ್ ಐಡಿ, ಚಾಲನಾ ಪರವಾನಗಿ ಫೋಟೋ ಹಾಕಿದ್ದಾರೆ.

ದಾಖಲೆಯಲ್ಲಿ ಬೇರೆ ಬೇರೆ ಜನ್ಮದಿನವಿದೆ. ಇದು ಮೊಹಮ್ಮದ್ ಶಮಿಗೆ ಮತ್ತಷ್ಟು ಸಂಕಷ್ಟ ತರುವ ಸಾಧ್ಯತೆಯಿದೆ.ಶಮಿಯ ಇಡೀ ಕುಟುಂಬ ನಕಲಿ ಎಂದಿರುವ ಹಸೀನ್, ಕುಟುಂಬಸ್ಥರು ಚಿತ್ರಹಿಂಸೆ ನೀಡುತ್ತಿದ್ದಾರೆ. ಯುಟ್ಯೂಬ್ ನಲ್ಲಿ ನಕಲಿ ವಿಡಿಯೋ ಹಾಕಿ ನನ್ನ ಗೌರವಕ್ಕೆ ಧಕ್ಕೆ ತರುವ ಯತ್ನ ನಡೆಸಿದ್ದಾರೆಂದು ಹಸೀನ್ ದೂರಿದ್ದಾರೆ.

ಫೇಸ್ಬುಕ್ ನಲ್ಲಿ ಹಸೀನ್ ಹಾಕಿರುವ ದಾಖಲೆಗಳಲ್ಲಿ ನಾಲ್ಕು ಪ್ರತ್ಯೇಕ ಜನ್ಮ ದಿನಗಳಿವೆ. ಅಂಕ ಪಟ್ಟಿಯಲ್ಲಿ ಬೇರೆ ಬೇರೆ ಜನ್ಮ ದಿನ ದಾಖಲಾಗಿದೆ. ಚಾಲನಾ ಪರವಾನಗಿ ಹಾಗೂ ವೋಟರ್ ಐಡಿಯಲ್ಲೂ ಬೇರೆ ಬೇರೆ ಜನ್ಮ ದಿನ ದಾಖಲಾಗಿದೆ. ಶಮಿ ಎಷ್ಟು ಮೋಸಗಾರ ಎಂಬುದನ್ನು ಇದ್ರಿಂದಲೇ ತಿಳಿಯಬಹುದು ಎಂದು ಹಸೀನ್ ದೂರಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಲು ಶಮಿ ಭಾರತದಲ್ಲಿಲ್ಲ. ಟೆಸ್ಟ್ ನಲ್ಲಿ ಶಮಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಶಮಿ ಮಾವ ಪ್ರತಿಕ್ರಿಯೆ ನೀಡಿದ್ದಾರೆ. ಶಮಿ ವೃತ್ತಿ ಜೀವನ ಹಾಳು ಮಾಡಲು ಹೀಗೆಲ್ಲ ಮಾಡಲಾಗ್ತಿದೆ ಎಂದು ದೂರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...