alex Certify
ಕನ್ನಡ ದುನಿಯಾ       Mobile App
       

Kannada Duniya

ವೈವಾಹಿಕ ಜೀವನಕ್ಕೆ ಕಾಲಿಟ್ಟ ಮತ್ತೊಬ್ಬ ಕ್ರಿಕೆಟ್ ಆಟಗಾರ

422979-irfan-pathan-getty

ಭಾರತ ಕ್ರಿಕೆಟ್ ತಂಡದ ಆಟಗಾರ 31 ವರ್ಷದ ಇರ್ಫಾನ್ ಪಠಾಣ್ ತಮ್ಮ ಬಹು ಕಾಲದ ಗೆಳತಿ ಸೌದಿ ಅರೇಬಿಯಾದ ಜೆಡ್ಡಾ ಮೂಲದ 21 ವರ್ಷದ ಸಫಾ ಬೇಗ್ ಜೊತೆ ವಿವಾಹ ಬಂಧನಕ್ಕೊಳಗಾಗಿದ್ದಾರೆ.

ಪವಿತ್ರ ಸ್ಥಳ ಮೆಕ್ಕಾದಲ್ಲಿ ಈ ವಿವಾಹ ನೆರವೇರಿದ್ದು, ಕುಟುಂಬ ಸದಸ್ಯರು ಹಾಗೂ ಹತ್ತಿರದ ಬಂಧುಗಳಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎಂದು ತಿಳಿದುಬಂದಿದೆ. ವಿವಾಹದ ನಂತರ ಅತಿಥಿಗಳಿಗೆ ಹೋಟೆಲ್ ನಲ್ಲಿ ಔತಣ ಕೂಟ ಏರ್ಪಡಿಸಲಾಗಿತ್ತೆನ್ನಲಾಗಿದೆ.

ಎರಡು ವರ್ಷಗಳ ಹಿಂದೆ ಸಫಾ ಬೇಗ್ ರನ್ನು ದುಬೈನಲ್ಲಿ ಇರ್ಫಾನ್ ಪಠಾಣ್ ಭೇಟಿಯಾಗಿದ್ದು, ನಂತರ ಅತ್ಮೀಯರಾಗಿದ್ದರು. ಮೂರು ತಿಂಗಳ ಹಿಂದೆ ಇವರಿಬ್ಬರ ವಿವಾಹ ನಿಶ್ಚಿತಾರ್ಥ ನೆರವೇರಿದ್ದು, ಸಫಾ ಒಮ್ಮೆ ವಡೋದರದಲ್ಲಿರುವ ಇರ್ಫಾನ್ ಮನೆಗೂ ಭೇಟಿ ನೀಡಿದ್ದರು. ಮುಂದಿನ ತಿಂಗಳು ಟೀಮ್ ಇಂಡಿಯಾ ಆಟಗಾರರು ಹಾಗೂ ಬಾಲಿವುಡ್ ಗಣ್ಯರಿಗಾಗಿ ಇರ್ಫಾನ್ ಪಠಾಣ್, ಮುಂಬೈನಲ್ಲಿ ಪಾರ್ಟಿ ಆಯೋಜಿಸಲಿದ್ದಾರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...