alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೀಷ್, ಹಿಂದಿಯಲ್ಲ ಈ ‘ಭಾಷೆ’ ಯಲ್ಲಿ ಮಾತನಾಡ್ತಾರೆ ಸಚಿನ್-ದ್ರಾವಿಡ್…!

ಇಂಗ್ಲೀಷನ್ನು ಸಾರ್ವತ್ರಿಕ ಭಾಷೆ ಎಂದು ಪರಿಗಣಿಸಲಾಗಿದೆ. ಇಂಗ್ಲೀಷ್ ಸ್ಪಷ್ಟವಾಗಿ ಬರದಿದ್ದವರೂ ಫ್ಯಾಶನ್ ಗಾಗಿಯಾದ್ರೂ ಇಂಗ್ಲೀಷ್ ನಲ್ಲಿ ಮಾತನಾಡ್ತಾರೆ. ಆದ್ರೆ ಕೆಲ ಕ್ರಿಕೆಟ್ ದಿಗ್ಗಜರು ಇಂಗ್ಲೀಷ್ ಬದಲು ತಮ್ಮ ಪ್ರಾದೇಶಿಕ ಭಾಷೆಯನ್ನು ಸಂವಹನಕ್ಕೆ ಬಳಸ್ತಾರೆ. ಅದ್ರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಗಂಗೂಲಿ, ಮುತ್ತಯ್ಯ ಮುರಳೀಧರನ್, ಶೋಯೆಬ್ ಅಖ್ತರ್ ಕೂಡ ಸೇರ್ತಾರೆ.

ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಸಂಭಾಷಣೆ ನಡೆಸುವುದಿಲ್ಲ. ಸಚಿನ್ ತೆಂಡೂಲ್ಕರ್ ಪ್ರಾದೇಶಿಕ ಭಾಷೆ ಮರಾಠಿ. ಇದು ಎಲ್ಲರಿಗೂ ಗೊತ್ತು. ಸಚಿನ್ ಕರ್ನಾಟಕದ ವಾಲ್ ರಾಹುಲ್ ದ್ರಾವಿಡ್ ಜೊತೆ ಮರಾಠಿಯಲ್ಲೇ ಮಾತನಾಡ್ತಾರೆ. ಕನ್ನಡ, ಇಂಗ್ಲೀಷ್ ನಷ್ಟೇ ಸರಾಗವಾಗಿ ರಾಹುಲ್ ಮರಾಠಿ ಮಾತನಾಡ್ತಾರೆ.

ಭಾರತದ ಸ್ಪಿನ್ನರ್ ಕುಂಬ್ಳೆ ಹಾಗೂ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮಾತುಕತೆಗೆ ಇಂಗ್ಲೀಷ್ ಬಳಸೋದಿಲ್ಲ. ಇಬ್ಬರೂ ತಮಿಳಿನಲ್ಲಿ ಮಾತನಾಡ್ತಾರೆ. ಕುಂಬ್ಳೆ ಕನ್ನಡ, ಹಿಂದಿ, ಇಂಗ್ಲೀಷ್ ಜೊತೆ ತಮಿಳನ್ನು ಬಲ್ಲವರಾಗಿದ್ದಾರೆ.

ಹರ್ಭಜನ್ ಹಾಗೂ ಶೋಯೆಬ್ ಅಖ್ತರ್ ಮೈದಾನದಲ್ಲಿ ಎಷ್ಟೇ ಕಿತ್ತಾಡಿಕೊಳ್ಳಲಿ ಅವರಿಬ್ಬರು ಒಳ್ಳೆ ಸ್ನೇಹಿತರು. ಒಟ್ಟಿಗೆ ಸಿಕ್ಕಾಗ ಅವರು ಮಾತನಾಡುವ ಭಾಷೆ ಪಂಜಾಬಿ ಎಂದ್ರೆ ನೀವು ನಂಬಲೇಬೇಕು.

ಸೌರಬ್ ಗಂಗೂಲಿ ಹಾಗೂ ಬಾಂಗ್ಲಾದೇಶದ ಹಬೀಬುಲ್ ಕೂಡ ಇಂಗ್ಲೀಷ್ ನಲ್ಲಿ ಮಾತನಾಡುವುದಿಲ್ಲ. ಇಬ್ಬರು ಎದುರು ಸಿಕ್ಕಾಗ ಅವ್ರ ಬಾಯಲ್ಲಿ ಬರೋದು ಬಂಗಾಳಿ ಭಾಷೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...