alex Certify
ಕನ್ನಡ ದುನಿಯಾ       Mobile App
       

Kannada Duniya

ವಿಂಡೀಸ್ ನಲ್ಲಿ ಮರುಕಳಿಸಿದ ಕ್ರಿಕೆಟ್ ವೈಭವ

wt20_women

ವೆಸ್ಟ್ ಇಂಡೀಸ್ ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಮ್ಮೆ ಸಾಮ್ರಾಟನಾಗಿದೆ. ಒಂದು ಕಾಲದಲ್ಲಿ ವೆಸ್ಟ್ ಇಂಡೀಸ್ ನಲ್ಲಿ ಕ್ರಿಕೆಟ್ ಉನ್ನತ ಹಂತದಲ್ಲಿತ್ತು. ಸ್ಪೋಟಕ ಬ್ಯಾಟ್ಸ್ ಮನ್ ಗಳು, ಮಿಂಚಿನ ಬೌಲರ್ ಗಳು ವಿಂಡೀಸ್ ತಂಡಕ್ಕೆ ಆಧಾರ ಸ್ತಂಭವಾಗಿದ್ದರು. ಎದುರಾಳಿ ತಂಡದ ಎದೆ ನಡುಗಿಸುತ್ತಿದ್ದರು.

ಮೊದಲ ಮತ್ತು ಎರಡನೇ ಏಕದಿನ ವಿಶ್ವಕಪ್ ಗೆದ್ದಿದ್ದ ವಿಂಡೀಸ್, ಕ್ರಿಕೆಟ್ ಜಗತ್ತಿನ ಅನಭಿಷಿಕ್ತ ದೊರೆಯಾಗಿತ್ತು. ನಂತರದಲ್ಲಿ ವಿಂಡೀಸ್ ಕ್ರಿಕೆಟ್ ಚಾರ್ಮ್ ಕಳೆದುಕೊಂಡು, ಲೀಗ್ ಹಂತದಲ್ಲಿಯೇ ಟೂರ್ನಿಯಿಂದಲೇ ಹೊರ ಬೀಳುತ್ತಿತ್ತು. ಕೆಲವು ವರ್ಷಗಳ ಕಾಲ ವೆಸ್ಟ್ ಇಂಡೀಸ್ ಲೆಕ್ಕಕ್ಕೆ ಇರಲಿಲ್ಲ. ಆನಂತರದಲ್ಲಿ ಒಬ್ಬೊಬ್ಬರೇ ಪ್ರತಿಭೆಗಳು ಕಾಣಿಸಿಕೊಂಡರು. 2012ರಲ್ಲಿ ಟಿ-20 ವಿಶ್ವಕಪ್ ಗಳಿಸಿದ್ದ ವಿಂಡೀಸ್ ಕ್ರಿಕೆಟ್ ತಂಡದಲ್ಲಿ ಹೊಸ ಬೆಳಕು ಮೂಡಿತ್ತು. ಇದರ ಪರಿಣಾಮ ವಿಂಡೀಸ್ ನಲ್ಲಿ ಕ್ರಿಕೆಟ್ ನ ಹೊಸ ಅಲೆಯೇ ಎದ್ದಿದೆ.

ಈ ವರ್ಷ ಮತ್ತೊಮ್ಮೆ ಟಿ-20 ಸಾಮ್ರಾಟನಾಗಿದೆ. ಅಲ್ಲದೇ, ಮಹಿಳಾ ಕ್ರಿಕೆಟ್ ಟಿ-20 ವಿಶ್ವಕಪ್ ನಲ್ಲಿಯೂ ವೆಸ್ಟ್ ಇಂಡೀಸ್ ಚಾಂಪಿಯನ್ ಆಗಿದೆ. ಜೊತೆಗೆ, ಕಳೆದ ಫೆಬ್ರವರಿಯಲ್ಲಿ ಜೂನಿಯರ್ ವಿಶ್ವಕಪ್ ಪಟ್ಟವನ್ನು ಅಲಂಕರಿಸಿದೆ. ಹೀಗೆ ಜೂನಿಯರ್, ಮಹಿಳಾ ಹಾಗೂ ಪುರುಷರ ವಿಶ್ವಕಪ್ ಗಳನ್ನು ಒಂದೇ ವರ್ಷ ಗಳಿಸಿದ ಕೆರಿಬಿಯನ್ನರು ಹೊಸ ದಾಖಲೆ ಬರೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...