alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್ ಕನಸಿಗೆ ಕೊಳ್ಳಿ ಇಟ್ಟ ಕೊನೆ ಓವರ್ ನ 4 ಎಸೆತ

West-Indies

ಕೋಲ್ಕತ್ತಾ: ಐಸಿಸಿ ವಿಶ್ವಕಪ್ ಟಿ-20 ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ಗೆಲ್ಲಲು ಕೊನೆಯ ಓವರ್ ನಲ್ಲಿ 19 ರನ್ ಬೇಕಿತ್ತು. ಇನ್ನೇನು ಇಂಗ್ಲೆಂಡ್ ಗೆದ್ದೇ ಬಿಟ್ಟಿತು ಎಂದು ಸಂಭ್ರಮಿಸುತ್ತಿದ್ದಾಗಲೇ ಚೆಂಡು ಬೌಂಡರಿ ಗೆರೆ ದಾಟಿತ್ತು.

ಕೊನೆಯ ಓವರ್ ನಲ್ಲಿ ಗೆಲುವಿಗೆ 19 ರನ್ ಗಳಿಸಬೇಕಿದ್ದ ವಿಂಡೀಸ್ ಪರವಾಗಿ ಬ್ರಾಥ್ ವೈಟ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ, ಬೆನ್ ಸ್ಟೋಕ್ಸ್ ಅವರ ಬೌಲಿಂಗ್ ನಲ್ಲಿ ಸತತ 4 ಸಿಕ್ಸರ್ ಬಾರಿಸಿದರು. ಆ ಮೂಲಕ ಕೆರೆಬಿಯನ್ ಅಭಿಮಾನಿಗಳ ವಿಶ್ವಕಪ್ ಕನಸನ್ನು ನನಸು ಮಾಡಿದರು. ಸತತ 4 ಸಿಕ್ಸ್ ಬಾರಿಸಿದ ಬ್ರಾಥ್ ವೈಟ್, ಹೀರೋ ಆದರು. ಫೈನಲ್ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತ್ತು.

ಜಾಯ್ ರೂಟ್ 54, ಜೋಸ್ ಬಟ್ಲರ್ 36 ರನ್ ಗಳಿಸಿದರು. ವಿಂಡೀಸ್ ಪರವಾಗಿ ಸಾಮ್ವೆಲ್ ಬದ್ರಿ 2, ಡ್ವೇನ್ ಬ್ರಾವೊ 3 ವಿಕೆಟ್ ಕಬಳಿಸಿದರು. ವಿಂಡೀಸ್ ಆರಂಭದಲ್ಲಿ ಎಡವಿತ್ತು. 11 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಆದರೆ, ಮರ್ಲಾನ್ ಸ್ಯಾಮುಯೆಲ್ ಅಜೇಯ 85, ಡ್ವೇನ್ ಬ್ರಾವೊ 25 ಹಾಗೂ ಕಾರ್ಲೊಸ್ ಬ್ರಾಥ್ ವೈಟ್ ಅಜೇಯ 34 ರನ್ ಗಳಿಸಿ ವಿಂಡೀಸ್ ಗೆಲುವಿಗೆ ಕಾರಣರಾದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...