alex Certify
ಕನ್ನಡ ದುನಿಯಾ       Mobile App
       

Kannada Duniya

‘ವಿರಾಟ್’ ಆಟದ ನಡುವೆಯೂ ಭಗ್ನವಾಯ್ತು ಕನಸು

Virat Kholi of India raises his bat after scoring a half century during the 3rd One Day International (ODI) match in the Star Sports Series between India and Australia held at the PCA International Stadium in Mohali on the 19th October 2013 Photo by Pal Pillai-BCCI-SPORTZPICS Use of this image is subject to the terms and conditions as outlined by the BCCI. These terms can be found by following this link: http://sportzpics.photoshelter.com/gallery/BCCI-Image-terms-and-conditions/G00004IIt7eWyCv4/C0000ubZaQCkIRgQ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ-20 ವಿಶ್ವಕಪ್ ಪಂದ್ಯಾವಳಿಯ ಎರಡನೇ ಸೆಮಿಫೈನಲ್ ನಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡಕ್ಕೆ ಸವಾಲಿನ ಮೊತ್ತವನ್ನೇ ನೀಡಿತ್ತು. ಟೀಂ ಇಂಡಿಯಾ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅಮೋಘ ಆಟ ಪ್ರದರ್ಶಿಸಿದ್ದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್ ಗಳಲ್ಲಿ 192 ರನ್ ಗಳಿಸಿತು. ವಿರಾಟ್ ಕೊಹ್ಲಿ ಅಜೇಯ 89 ರನ್ ಗಳಿಸಿದ್ದು, 47 ಎಸೆತಗಳನ್ನು ಎದುರಿಸಿ, 11 ಬೌಂಡರಿ 1 ಸಿಕ್ಸರ್ ಸಿಡಿಸಿದರು. ಆಸೀಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದಂತೆ ವಿಂಡೀಸ್ ವಿರುದ್ಧದ ಪಂದ್ಯದಲ್ಲಿಯೂ ಕೊಹ್ಲಿ ಕಮಾಲ್ ಮಾಡಿದರು. 33 ಬಾಲ್ ಗಳಲ್ಲಿ ಅರ್ಧ ಶತಕ ಗಳಿಸಿ, ಆಕ್ರಮಣಕಾರಿಯಾದ ಆಟವಾಡಿದರು. ಆದರೆ, ಕೊಹ್ಲಿ ಆಟವಾಡಿದರೂ, ವಿಂಡೀಸ್ ಲೆಂಡ್ಸ್ ಸಿಮನ್ಸ್ ಭಾರತದ ಗೆಲುವನ್ನು ಕಸಿದುಕೊಂಡರು.

ಸಿಮನ್ಸ್ 51 ಎಸೆತಗಳಲ್ಲಿ 7 ಬೌಂಡರಿ 5 ಸಿಕ್ಸರ್ ನೆರವಿನಿಂದ ಅಜೇಯ 83 ರನ್ ಗಳಿಸಿದರು. ಆ ಮೂಲಕ ಫೈನಲ್ ತಲುಪಬೇಕೆಂಬ ಭಾರತದ ಕನಸು ಭಗ್ನವಾಯಿತು. ಕೋಟ್ಯಾಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಗೆಲುವು ಸಿಗದೇ ಭಾರತದ ಅಭಿಮಾನಿಗಳಿಗೆ ನಿರಾಸೆಯಾಯಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...