alex Certify
ಕನ್ನಡ ದುನಿಯಾ       Mobile App
       

Kannada Duniya

ಫೈನಲ್ ಗೆ ಲಗ್ಗೆ ಇಟ್ಟ ವೆಸ್ಟ್ ಇಂಡೀಸ್

lend simon

ಮುಂಬೈ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ, ಐಸಿಸಿ ವಿಶ್ವಕಪ್ ಟಿ-20 ಪಂದ್ಯಾವಳಿಯ ಎರಡನೇ ಸೆಮಿಫೈನಲ್ ನಲ್ಲಿ, ಭಾರತ ತಂಡದ ಎದುರು ಜಯಗಳಿಸಿದ, ವೆಸ್ಟ್ ಇಂಡೀಸ್ ಫೈನಲ್ ಪ್ರವೇಶಿಸಿದೆ. ಜಾನ್ಸನ್ ಚಾರ್ಲ್ಸ್ ಹಾಗೂ ಲೆಂಡ್ ಸಿಮನ್ಸ್ ವಿಂಡೀಸ್ ಗೆಲುವಿನ ರೂವಾರಿಗಳಾದರು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಸ್ಪೋಟಕ ಬ್ಯಾಟ್ಟ್ ಮನ್ ವಿರಾಟ್ ಕೊಹ್ಲಿ ಅಮೋಘ ಆಟದ ನೆರವಿನಿಂದ, ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು, 192 ರನ್ ಬೃಹತ್ ಮೊತ್ತ ಪೇರಿಸಿತು. ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ 89 ರನ್ ಗಳಿಸಿದರು. ಮಹೇಂದ್ರಸಿಂಗ್ ಧೋನಿ ಅಜೇಯ 15 ರನ್ ಗಳಿಸಿದರು, ರೋಹಿತ್ ಶರ್ಮ 43, ರೆಹಾನೆ 40 ರನ್ ಗಳಿಸಿದರು. ವಿಂಡೀಸ್ ಪರವಾಗಿ ಬದ್ರಿ ಹಾಗೂ ರಸೆಲ್ ತಲಾ 1 ವಿಕೆಟ್ ಕಬಳಿಸಿದರು.

193 ರನ್ ಗೆಲುವಿನ ಗುರಿ ಬೆನ್ನತ್ತಿದ್ದ ವಿಂಡೀಸ್ ಆರಂಭದಲ್ಲಿಯೇ ಬೂಮ್ರ ಬೌಲಿಂಗ್ ನಲ್ಲಿ ಕ್ರಿಸ್ ಗೇಲ್ ವಿಕೆಟ್ ಕಳೆದುಕೊಂಡಿತು. ನಂತರದಲ್ಲಿ ಸ್ಯಾಮುಯೆಲ್ ಕೂಡ ಔಟಾದಾಗ, ಭಾರತದ ಪಾಳೆಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ, ಆ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಜಾನ್ಸನ್ ಚಾರ್ಲ್ಸ್ 52, ಲೆಂಡ್ಸ್ ಸಿಮನ್ಸ್ ಅಜೇಯ 83, ಆಂಡ್ರೆ ರಸೆಲ್ ಅಜೇಯ 43 ರನ್ ಗಳಿಸಿದರು. ಇನ್ನು 2 ಎಸೆತ ಬಾಕಿ ಇರುವಾಗಲೇ ವಿಂಡೀಸ್ ಗೆಲುವು ಕಂಡಿತು. ಭಾರತದ ಫೈನಲ್ ಕನಸು ಭಗ್ನವಾಯಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...