alex Certify
ಕನ್ನಡ ದುನಿಯಾ       Mobile App
       

Kannada Duniya

ಅರ್ಧ ಶತಕ ಗಳಿಸಿದ ಕೊಹ್ಲಿ ಮಾಡಿದ್ದೇನು..?

virat 20

ಕೋಲ್ಕತ್ತಾ: ಐಸಿಸಿ ವಿಶ್ವಕಪ್ ಟಿ-20 ಪಂದ್ಯಾವಳಿಯಲ್ಲಿ, ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ, ಭರ್ಜರಿ ಆಟವಾಡಿದ ವಿರಾಟ್ ಕೊಹ್ಲಿ, ಅರ್ಧ ಶತಕ ಗಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಅರ್ಧ ಶತಕ ಗಳಿಸಿದ ಸಂದರ್ಭದಲ್ಲಿ, ವಿರಾಟ್ ಕೊಹ್ಲಿ ತಲೆ ಬಾಗಿ ಸಚಿನ್ ತೆಂಡೂಲ್ಕರ್ ಅವರಿಗೆ ನಮಿಸಿದ್ದಾರೆ.

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ, ಪಾಕಿಸ್ತಾನ ನೀಡಿದ 119 ರನ್ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ, ಕೊಹ್ಲಿ ಅಮೋಘ ಆಟದ ನೆರವಿನಿಂದ ಜಯಗಳಿಸಿತು. ಅರ್ಧ ಶತಕ ಗಳಿಸಿದ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರತ್ತ ತಿರುಗಿ, ಬ್ಯಾಟ್ ತೋರಿಸಿ ಶಿರಬಾಗಿ ನಮಿಸಿದರು. ಇದಕ್ಕೆ ಸಚಿನ್ ಕೂಡ ಪೂರಕ ಪ್ರತಿಕ್ರಿಯೆ ನೀಡಿ, ಶುಭವಾಗಲಿ ಎಂದು ಹಾರೈಸಿದರು. ತಮ್ಮ ಅಮೋಘ ಅರ್ಧ ಶತಕವನ್ನು ಕೊಹ್ಲಿ, ಸಚಿನ್ ಅವರಿಗೆ ಅರ್ಪಿಸಿದರು.

ಭಾರೀ ನಿರೀಕ್ಷೆ, ಕುತೂಹಲ ಮೂಡಿಸಿದ್ದ ಈ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸುತ್ತಿದ್ದಂತೆ, ದೇಶಾದ್ಯಂತ ಸಂಭ್ರಮಾಚರಣೆ ನಡೆದಿದೆ. ತಡರಾತ್ರಿಯಲ್ಲೂ ಜನ ರಸ್ತೆಗೆ ಬಂದು, ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲದೇ, ಕೊಹ್ಲಿ ಆಟವನ್ನು ಕೊಂಡಾಡಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...