alex Certify
ಕನ್ನಡ ದುನಿಯಾ       Mobile App
       

Kannada Duniya

‘ವಿರಾಟ್’ ಆಟದಿಂದ ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ

kohli 20

ಕೋಲ್ಕತ್ತಾ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡದ ಆಟಗಾರರ ಅಮೋಘ ಆಟಕ್ಕೆ ಪಾಕ್‍ ಸೋಲು ಕಂಡಿದೆ.

ಭಾರೀ ನಿರೀಕ್ಷೆ ಮೂಡಿಸಿದ್ದ ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದೆಂದು ಅಭಿಮಾನಿಗಳಲ್ಲಿ ಆತಂಕ ಮೂಡಿತ್ತಾದರೂ, ಮಳೆ ನಿಂತ ಬಳಿಕ ಪಂದ್ಯ ಆರಂಭವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 18 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಭಾರತದ ಗೆಲುವಿಗೆ 119 ರನ್ ಗಳ ಗುರಿ ನೀಡಿತು. ಪಾಕ್ ಪರವಾಗಿ ಶಾರ್ಜಿಲ್ ಖಾನ್ 17, ಅಹ್ಮದ್ ಶೇಹ್ಜಾದ್ 25, ಉಮರ್ ಅಕ್ಮಲ್ 22, ಶೋಯಬ್ ಮಲಿಕ್ 26 ರನ್ ಗಳಿಸಿದರು. ಭಾರತ ಪರವಾಗಿ ಆಶಿಶ್ ನೆಹ್ರಾ, ಜಸ್ ಪ್ರೀತ್ ಬೂಮ್ರಾ, ರವೀಂದ್ರ ಜಡೇಜ, ಸುರೇಶ್ ರೈನಾ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.

119 ರನ್ ಗೆಲುವಿನ ಗುರಿ ಬೆನ್ನತ್ತಿದ ಭಾರತ, 15.5 ಓವರ್ ಗಳಲ್ಲಿ 119 ರನ್ ಗಳಿಸಿ ಗೆಲುವಿನ ನಗೆ ಬೀರಿತು. ರೋಹಿತ್ ಶರ್ಮ 10, ಶಿಖರ್ ಧವನ್ 6, ವಿರಾಟ್ ಕೊಹ್ಲಿ ಅಜೇಯ 55, ಯುವರಾಜ್ ಸಿಂಗ್ 24 ಹಾಗೂ ಧೋನಿ ಅಜೇಯ 13 ರನ್ ಗಳಿಸಿದರು. ಪಾಕ್ ಪರವಾಗಿ ಮಹಮ್ಮದ್ ಸಮಿ 2, ಅಮೀರ್, ರಿಯಾಜ್ ತಲಾ 1 ವಿಕೆಟ್ ಗಳಿಸಿದರು. ಭಾರತ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...