alex Certify
ಕನ್ನಡ ದುನಿಯಾ       Mobile App
       

Kannada Duniya

ಇಂತಹ ಕೆಲಸ ಮಾಡಿದ ಕ್ರಿಕೆಟಿಗರು ಅರೆಸ್ಟ್

ಶ್ರೀನಗರ: ಪಂದ್ಯದ ಆರಂಭದ ವೇಳೆ ಪಾಕಿಸ್ತಾನ ರಾಷ್ಟ್ರಗೀತೆಯನ್ನು ನುಡಿಸಿ, ಅದಕ್ಕೆ ಗೌರವ ಸೂಚಿಸಿದ ಕ್ರಿಕೆಟ್ ಆಟಗಾರರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿ ಎಂ.ಸಿ.ಸಿ. ಗೊಂಡಿಪೊರಾ ಮತ್ತು ಡಾಸ್ಪೋರಾ ಕ್ರಿಕೆಟ್ ಕ್ಲಬ್ ಗಳ ನಡುವೆ ಜನವರಿ 3 ರಂದು ಸ್ಥಳೀಯ ಪಂದ್ಯಾವಳಿ ಆಯೋಜಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಧ್ವನಿವರ್ಧಕದಲ್ಲಿ ಪಾಕಿಸ್ತಾನದ ರಾಷ್ಟ್ರಗೀತೆ ಮೊಳಗುವಾಗ ಎರಡೂ ತಂಡಗಳ ಆಟಗಾರರು ನಿಂತು ಗೌರವ ಸೂಚಿಸಿರುವ ವಿಡಿಯೋ ವೈರಲ್ ಆಗಿದೆ.

ಘಟನೆ ಗಮನಕ್ಕೆ ಬರುತ್ತಿದ್ದಂತೆ ಕ್ರಮ ಕೈಗೊಂಡಿರುವ ಪೊಲೀಸರು ಕ್ರಿಕೆಟ್ ಆಟಗಾರರನ್ನು ವಶಕ್ಕೆ ಪಡೆದಿದ್ದಾರೆ. ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ ಎಂದು ಬಂಡಿಪೋರಾ ಹಿರಿಯ ಪೊಲೀಸ್ ಅಧೀಕ್ಷಕ ಶೇಖ್ ಜುಲ್ಫಿಕರ್ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಇಂತಹ ಘಟನೆ ಮೊದಲೇನಲ್ಲ. ಕಳೆದ ಏಪ್ರಿಲ್ ನಲ್ಲಿ ಗುಂಡೇರ್ಬಲ್ ಜಿಲ್ಲೆಯಲ್ಲಿ ಪಾಕಿಸ್ತಾನದ ಜರ್ಸಿಯನ್ನು ಧರಿಸಿ ಪಾಕ್ ರಾಷ್ಟ್ರಗೀತೆ ಹಾಡಿದ ಯುವಕರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...