alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಸಿ.ಸಿ.ಐ. ಅಸಮಾಧಾನಕ್ಕೆ ಕಾರಣವಾಯ್ತು ಆಟಗಾರರ ಆ ಫೋಟೋ

rahul

ನವದೆಹಲಿ: ಆಟವೆಂದ ಮೇಲೆ ಖುಷಿ ಇದ್ದೇ ಇರುತ್ತದೆ. ಅದರಲ್ಲಿಯೂ ವಿದೇಶಗಳಿಗೆ ಆಟವಾಡಲು ಹೋದಾಗ ಮೋಜು ಮಸ್ತಿಗೇನು ಕೊರತೆ ಇರಲ್ಲ. ಸದ್ಯ ವೆಸ್ಟ್ ಇಂಡೀಸ್ ಗೆ ಟೆಸ್ಟ್ ಪಂದ್ಯಗಳನ್ನಾಡಲು ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ತೆರಳಿದೆ.

ವಿಂಡೀಸ್ ನಲ್ಲಿ ಯುವ ಆಟಗಾರರು ಮೋಜು ಮಸ್ತಿಯಲ್ಲಿದ್ದಾರೆ. ಅವರ ಫೋಟೋಗಳು ಈಗಾಗಲೇ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಹರಿದಾಡಿವೆ. ಅದರಲ್ಲಿಯೂ, ಕನ್ನಡಿಗರಾದ ಕೆ.ಎಲ್. ರಾಹುಲ್, ಸ್ಟುವರ್ಟ್ ಬಿನ್ನಿ, ಉಮೇಶ್ ಯಾದವ್ ಬಿಯರ್ ಬಾಟಲಿಯೊಂದನ್ನು ಕೈಯಲ್ಲಿಡಿದುಕೊಂಡಿದ್ದ ಪೋಟೋ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕಾಣಿಸಿಕೊಂಡಿತ್ತು. ಇದಕ್ಕೆ ಬಿ.ಸಿ.ಸಿ.ಐ ಆಕ್ಷೇಪ ವ್ಯಕ್ತಪಡಿಸಿದೆ. ಆಟಗಾರರ ನಡೆ ಇನ್ನೊಬ್ಬರಿಗೆ ಮಾದರಿಯಾಗಿರಬೇಕೆಂದು ಹೇಳಿದೆ.

ಪ್ರವಾಸ, ಆಟದ  ಸಂದರ್ಭದಲ್ಲಿ ಎಂಜಾಯ್ ಮಾಡುವುದು ತಪ್ಪೇನಲ್ಲ . ಆದರೆ, ಕೆಲವು ಆಟಗಾರರು ತಾವು ಕುಡಿಯುತ್ತಿರುವ ದೃಶ್ಯವನ್ನು ಸೆರೆ ಹಿಡಿದು ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವುದು ಸರಿಯಲ್ಲ. ಆಟಗಾರರನ್ನು ಕೆಲವು ಯುವಕರು ಮಾದರಿ ಎಂದುಕೊಂಡಿರುತ್ತಾರೆ ಎಂದು ಬಿ.ಸಿ.ಸಿ.ಐ. ಎಚ್ಚರಿಕೆ ಸಂದೇಶ ರವಾನಿಸಿದೆ.

ಟೀಂ ಇಂಡಿಯಾ ವ್ಯವಸ್ಥಾಪಕ ರಿಯಾಜ್ ಬಗ್ವಾನ್ ಮೂಲಕ ಬಿ.ಸಿ.ಸಿ.ಐ. ಆಟಗಾರರಿಗೆ ಸೂಚನೆ ನೀಡಿದ್ದು, ನಿಮ್ಮ ನಡೆ ಉತ್ತಮವಾಗಿರಲಿ. ಸಂತೋಷದ ಜೊತೆಗೆ ನಿಮ್ಮ ಜವಾಬ್ದಾರಿ ಬಗ್ಗೆಯೂ ತಿಳಿದಿರಲಿ ಎಂದು ಹೇಳಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...