alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ದಾಖಲೆ ನೀಡಿ ಡಿಎಸ್ಪಿ ಹುದ್ದೆ ಕಳೆದುಕೊಳ್ತಾರಾ ಹರ್ಮನ್ ಪ್ರೀತ್ ಕೌರ್..!?

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಪದವಿ ಈಗ ವಿವಾದಕ್ಕೆ ಕಾರಣವಾಗಿದೆ. ಅವ್ರು ನಕಲಿ ಡಿಗ್ರಿ ಪ್ರಮಾಣ ಪತ್ರ ನೀಡಿದ್ದಾರೆಂಬುದು ಬಹಿರಂಗವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ ವಿಜಿಲೆನ್ಸ್ ಡಿಪಾರ್ಟ್ಮೆಂಟ್ನಿಂದ ಗೌಪ್ಯ ತನಿಖೆ ನಡೆಸಿದ್ದರು. ವಿಜಿಲೆನ್ಸ್ ಡಿಪಾರ್ಟ್ಮೆಂಟ್ ಮಾರ್ಕ್ಸ್ ಶೀಟ್ ನ ಯಾವುದೇ ದಾಖಲೆಯಿಲ್ಲ ಎಂದಿದೆ.

ಹರ್ಮನ್ ಪ್ರೀತ್ ಕೌರ್ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ ಹುದ್ದೆ ಹೊಂದಿದ್ದಾರೆ. ಈ ವರ್ಷ ಮಾರ್ಚ್ 1ರಂದು ಹರ್ಮನ್ ಪ್ರೀತ್ ಹುದ್ದೆ ಅಲಂಕರಿಸಿದ್ದಾರೆ. ಹರ್ಮನ್ ಪ್ರೀತ್ ಪೊಲೀಸರಿಗೆ ಡಿಗ್ರಿ ಸರ್ಟಿಫಿಕೆಟ್ ನೀಡಿದ್ದಾರೆ. ಮೀರತ್ ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಬಗ್ಗೆ ದಾಖಲೆ ನೀಡಿದ್ದಾರೆ. ಇದ್ರ ಬಗ್ಗೆ ಪರಿಶೀಲನೆ ನಡೆಸಲು ಹೋದಾಗ ವಿಶ್ವವಿದ್ಯಾನಿಲಯ ದಾಖಲೆಯಲ್ಲಿರುವ ನೋಂದಣಿ ಸಂಖ್ಯೆಯನ್ನು ನಕಲಿ ಎಂದಿದೆ.

ಕ್ರೀಡಾ ವಿಭಾಗದಿಂದ ಹರ್ಮನ್ ಪ್ರೀತ್ ರಿಗೆ ಮುಖ್ಯಮಂತ್ರಿಗಳು ಈ ಹುದ್ದೆ ನೀಡಿದ್ದಾರೆ. ಕ್ರಿಕೆಟ್ ನಲ್ಲಿ ಅದ್ಭುತ ಆಟವಾಡಿ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿರುವ ಹರ್ಮನ್ ಪ್ರೀತ್ ಈಗ ಮೋಸ ಮಾಡಿದ್ದಾರೆಂಬ ವರದಿ ಆಘಾತಕ್ಕೆ ಕಾರಣವಾಗಿದೆ. ಅಂತಿಮ ತನಿಖೆ ನಡೆಯುತ್ತಿದ್ದು, ಶೀಘ್ರವೇ ಸತ್ಯಾಸತ್ಯತೆ ಹೊರ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...