alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಲಿನ ಕಹಿ ಮರೆಯಲು ಟೀಂ ಇಂಡಿಯಾ ಮಾಡಿದ್ದೇನು?

ಧರ್ಮಶಾಲಾದಲ್ಲಿ ನಡೆದ ಶ್ರೀಲಂಕಾ-ಭಾರತ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದೆ. ಮೊದಲ ಗೆಲುವಿನ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಮೊದಲ ಸೋಲಿನ ಕಹಿಯನ್ನು ಟೀಂ ಇಂಡಿಯಾ ಆಟಗಾರರು ಬೋನ್ ಫೈರ್ ಮೂಲಕ ಮರೆಯಲು ಯತ್ನಿಸಿದ್ದಾರೆ.

ಹಿಮಾಚಲದ ಚುಮು-ಚುಮು ಚಳಿಯಲ್ಲಿ ಬೋನ್ ಫೈರ್ ಆಡಿ ಸೋಲಿನ ಕಹಿ ಮರೆತಿದ್ದಾರೆ. ಬೆಂಕಿ ಹತ್ತಿಸಿ ಅದ್ರ ಸುತ್ತ ಕುಳಿತ ಆಟಗಾರರು ಮೈ ಬೆಚ್ಚಗೆ ಮಾಡಿಕೊಂಡ್ರು. ಮಹೇಂದ್ರ ಸಿಂಗ್ ಧೋನಿ, ಶಿಖರ್ ಧವನ್, ಹಾರ್ತಿಕ್ ಪಾಂಡ್ಯ, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್ ಸೇರಿದಂತೆ ಕೆಲ ಆಟಗಾರರು ಬೋನ್ ಫೈರ್ ನಲ್ಲಿ ಕಾಣಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇದ್ರ ಫೋಟೋ ವೈರಲ್ ಆಗಿದೆ.

ಡಿಸೆಂಬರ್ 10ರಂದು ಶ್ರೀಲಂಕಾ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಕೇವಲ 112 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು. ಧೋನಿ 65 ರನ್ ಗಳಿಸಿ ತಂಡ 100 ಗಡಿ ದಾಟಲು ನೆರವಾಗಿದ್ದರು. 112 ರನ್ ಗುರಿ ಬೆನ್ನು ಹತ್ತಿದ ಶ್ರೀಲಂಕಾ 7 ವಿಕೆಟ್ ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...