alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಸಿಸಿಐಗೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್

supreme_cour

ನವದೆಹಲಿ: ಕೋಟ್ಯಂತರ ಹಣ ಹರಿದುಬರುತ್ತಿದ್ದರೂ, ಬಿಸಿಸಿಐ ದೇಶದಲ್ಲಿ ಕ್ರಿಕೆಟ್ ಉತ್ತೇಜನಕ್ಕೆ ನಿರೀಕ್ಷಿತ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಬಿಸಿಸಿಐನಿಂದ ಗುಜರಾತ್ ರಾಜ್ಯಕ್ಕೆ 66 ಕೋಟಿ ರೂಪಾಯಿ ನೀಡಿದ್ದು, 11 ರಾಜ್ಯಗಳಿಗೆ ಅನುದಾನವನ್ನೇ ನೀಡದೇ ತಾರತಮ್ಯ ಮಾಡಲಾಗಿದೆ.

ಲೋಧಾ ಸಮಿತಿಯಿಂದ ಸಲ್ಲಿಸಲಾದ ವರದಿಯನ್ನು ಹೇಗೆ ಜಾರಿಗೆ ತರಬಹುದೆಂಬುದರ ಕುರಿತಂತೆ ಬಿಸಿಸಿಐನಿಂದ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಲಾಗಿದ್ದು, ಇದರ ವಿಚಾರಣೆ ಸಂದರ್ಭದಲ್ಲಿ ಕೋರ್ಟ್, ಬಿಸಿಸಿಐಗೆ ತರಾಟೆಗೆ ತೆಗೆದುಕೊಂಡಿದೆ. ದೇಶದಲ್ಲಿ ಕ್ರಿಕೆಟ್ ಗೆ ಕಳಂಕ ಅಂಟಿದ್ದು, ಅದನ್ನು ಸರಿಪಡಿಸಲು ಪ್ರಯತ್ನಿಸಿಲ್ಲ. ಅಲ್ಲದೇ, ಕ್ರಿಕೆಟ್ ಬೆಳವಣಿಗೆಗೆ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. 5 ವರ್ಷಗಳಲ್ಲಿ ಸುಮಾರು 11 ರಾಜ್ಯಗಳಿಗೆ ಅನುದಾನ ನೀಡಿಲ್ಲ.

ಈಶಾನ್ಯದ ಕೆಲವು ರಾಜ್ಯಗಳಿಗೆ 50 ಲಕ್ಷ ರೂ. ಮಾತ್ರ ನೀಡಲಾಗಿದೆ. ಆದರೆ, ಗುಜರಾತ್ ಗೆ 66 ಕೋಟಿ ರೂ. ನೀಡಲಾಗಿದೆ ಎಂದು ನ್ಯಾಯಾಲಯ ಆಕ್ಷೇಪಿಸಿದೆ. ಕ್ರಿಕೆಟ್ ನಲ್ಲಿ ನಡೆದಿದ್ದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಲೋಧಾ ಸಮಿತಿಯನ್ನು ನೇಮಿಸಿದ್ದು, ಈ ಸಮಿತಿ ನೀಡಿರುವ ವರದಿ ಜಾರಿಯಾದರೆ, ನಷ್ಟವಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...