alex Certify
ಕನ್ನಡ ದುನಿಯಾ       Mobile App
       

Kannada Duniya

25 ಸಾವಿರ ಕೋಟಿ ರೂ. ಆದಾಯ ಹೊಂದಿದ್ದರೂ ಸಿಬ್ಬಂದಿ ವೇತನವನ್ನೇ ಏರಿಕೆ ಮಾಡಿಲ್ಲ ಈ ಸಂಸ್ಥೆ

ಕ್ರಿಕೆಟ್ ಜನಕರು ಇಂಗ್ಲೆಂಡಿಗರಾದ್ರು ವಿಶ್ವ ಕ್ರಿಕೆಟ್ ರಂಗಕ್ಕೆ ಬಾಸ್ ಆಗಿರೋದು ಬಿಸಿಸಿಐ. ಆದ್ರೆ ಪ್ರಸಕ್ತ ವರ್ಷದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಿಬ್ಬಂದಿಯ ವೇತನ ಏರಿಕೆ ಮಾಡದೆ ತಾರತಮ್ಯ ನೀತಿ ಅನುಸರಿಸ್ತಿರೋ ವಿಚಾರ ಬೆಳಕಿಗೆ ಬಂದಿದೆ. ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿರೋ ಬಿಸಿಸಿಐ ಹೆಡ್ಡಾಫೀಸಿನಲ್ಲಿ ಈಗ ಅಧಿಕಾರಿಗಳ ನಡುವಿನ ಜಗಳಕ್ಕೆ ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ಕೊಕ್ಕೆ ಬಿದ್ದಿದೆಯಂತೆ.

ಪ್ರಸಕ್ತ ವರ್ಷದಲ್ಲಿ ಬಿಸಿಸಿಐ ಖಜಾನೆಗೆ 25 ಸಾವಿರ ಕೋಟಿ ರೂಪಾಯಿ ಆದಾಯ ಬಂದಿದೆ. ಹಾಗಿದ್ದರು ನೂರರ ಸಂಖ್ಯೆಯ ಆಸುಪಾಸಿನಲ್ಲಿರುವ ಸಿಬ್ಬಂದಿಯ ವೇತನ ಹೆಚ್ಚಿಸೋಕೆ ಬಿಸಿಸಿಐ ಹಿಂದು ಮುಂದು ನೋಡ್ತಿದೆಯಂತೆ. ಬಿಸಿಸಿಐ ಅಧಿಕಾರಿಗಳ ಮಧ್ಯೆ ನಡೆಯುತ್ತಿರುವ ಆಂತರಿಕ ಕಲಹವೇ ಇದಕ್ಕೆ ಕಾರಣ ಅಂತ ಹೇಳಲಾಗ್ತಿದೆ.

ಐಪಿಎಲ್ ನ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಆರು ಮಂದಿ ಅಧಿಕಾರಿಗಳಿಂದಾಗಿ ಬಿಸಿಸಿಐ ಸಿಬ್ಬಂದಿಗೆ ಇನ್ಕ್ರಿಮೆಂಟ್ ಸಿಗದಂತಾಗಿದೆಯಂತೆ. ಐಪಿಎಲ್ ವರ್ಸಸ್ ದೇಶೀಯ ಕ್ರಿಕೆಟ್ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ನ ಬ್ಯಾಕ್ ಹ್ಯಾಂಡ್ ಕೆಲಸಗಳ ಉಸ್ತುವಾರಿ ವಹಿಸಿರುವವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಐಪಿಎಲ್ ನ ಸಿಬ್ಬಂದಿ ವೇತನ ಹೆಚ್ಚಳದ ಜೊತೆಗೆ ಹುದ್ದೆಯಲ್ಲಿ ಪ್ರಮೋಶನ್ ಬೇಡಿಕೆಗೆ ಬಿಸಿಸಿಐ ಕಾರ್ಯನಿರ್ವಣಾಧಿಕಾರಿ ರಾಹುಲ್ ಜೋಹ್ರಿ ವಿರೋಧ ವ್ಯಕ್ತಪಡಿಸಿರೋದೇ ಸಿಬ್ಬಂದಿಗೆ ವೇತನ ಹೆಚ್ಚಾಗದಿರಲು ಕಾರಣವಂತೆ.

ಈಗಾಗ್ಲೇ ಸುಪ್ರೀಂಕೋರ್ಟ್ ಬಿಸಿಸಿಐನ ಆಡಳಿತವನ್ನು ನಿಯಂತ್ರಿಸೋಕೆ ವಿನೋದ್ ರಾಯ್ ನೇತೃತ್ವದಲ್ಲಿ ಆಡಳಿತಾಧಿಕಾರಿಗಳ ಕಮಿಟಿಯನ್ನ ರಚಿಸಿದೆ. ಸುಪ್ರೀಂಕೋರ್ಟ್ ನೇಮಿಸಿರುವ ಕಮಿಟಿಯೇ ಈ ವಿವಾದವನ್ನು ಬಗೆಹರಿಸುವ ನಿರೀಕ್ಷೆ ಇದೆ. ಅತಿ ಶೀಘ್ರದಲ್ಲೇ ಕಮಿಟಿ ಮತ್ತು ಬಿಸಿಸಿಐ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆಯಂತೆ. ಹಾಗಾಗಿ ವಿವಾದ ಬಗೆಹರಿಯುವ ನಿರೀಕ್ಷೆಯನ್ನ ಹೊಂದಿದ್ದಾರೆ ಬಿಸಿಸಿಐ ಸಿಬ್ಬಂದಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...