alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ-ಪಾಕ್ ಹೈವೋಲ್ಟೇಜ್ ಮ್ಯಾಚ್ ಗೆ ಕೌಂಟ್ ಡೌನ್ ಶುರು

ind pak 19 mn

ಕೋಲ್ಕತ್ತಾ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಇಂದು ರಾತ್ರಿ 7.30 ಕ್ಕೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ವಿಶ್ವಕಪ್ ನ ಪ್ರಮುಖ ಪಂದ್ಯ ಎಂದೇ ಹೇಳಲಾಗಿರುವ ಈ ಪಂದ್ಯಕ್ಕೆ ಈಡನ್ ಗಾರ್ಡನ್ ಮೈದಾನ ಸಜ್ಜಾಗಿದೆ.

ವಿಶ್ವಕಪ್ ಟಿ-20 ಪಂದ್ಯದಲ್ಲಿ ಪಾಕಿಸ್ತಾನ ಭಾಗವಹಿಸುವುದೇ ಅನುಮಾನವಾಗಿತ್ತು. ಮೊದಲು ಧರ್ಮಶಾಲಾದಲ್ಲಿ ಪಂದ್ಯ ಆಯೋಜಿಸಲಾಗಿತ್ತಾದರೂ, ನಂತರ ಭದ್ರತೆ ಕಾರಣದಿಂದ ಪಂದ್ಯವನ್ನು ಕೋಲ್ಕತ್ತಾಕ್ಕೆ ಸ್ಥಳಾಂತರಿಸಲಾಗಿತ್ತು. ಮಾರ್ಚ್ 19 ಯಾವಾಗ ಬರುತ್ತದೆ ಎಂದು ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದರು. ಅವರ ನಿರೀಕ್ಷೆ, ಕುತೂಹಲಕ್ಕೆ ಇಂದು ರಾತ್ರಿ ತೆರೆ ಬೀಳಲಿದೆ. ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ ಹಾಗೂ ಪಾಕ್ ಮುಖಾಮುಖಿಯಾಗಲಿವೆ.

ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ಒಮ್ಮೆಯೂ ಪಾಕ್ ಎದುರು ಸೋಲು ಕಂಡಿಲ್ಲ. ಟಿ-20 ಯಲ್ಲಿ ಭಾರತ ಮತ್ತು ಪಾಕ್ ನಡುವೆ 7 ಪಂದ್ಯಗಳು ನಡೆದಿದ್ದು, 5 ರಲ್ಲಿ ಭಾರತ ಜಯ ಗಳಿಸಿದ್ದರೆ, 1 ರಲ್ಲಿ ಪಾಕ್ ಗೆಲುವು ಕಂಡಿದೆ. ಒಂದು ಪಂದ್ಯ ಟೈ ಆಗಿದೆ. ಉಭಯ ತಂಡಗಳ ನಾಯಕರಾದ ಮಹೇಂದ್ರಸಿಂಗ್ ಧೋನಿ, ಶಾಹಿದ್ ಅಫ್ರಿದಿ ಗೆಲುವಿಗೆ ಇನ್ನಿಲ್ಲದ ಕಾರ್ಯತಂತ್ರ ರೂಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...