alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಅಭಿಮಾನಿಗೆ ಧೋನಿ ಕೊಟ್ಟಿದ್ದೇನು..?

dhoni fan

ಆಟಕ್ಕೆ ಭಾಷೆ, ಗಡಿಯ ಹಂಗಿಲ್ಲ. ಆಟಗಾರರಿಗೆ ಎಲ್ಲಾ ಕಡೆಗಳಲ್ಲಿಯೂ ಅಭಿಮಾನಿಗಳಿರುತ್ತಾರೆ. ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರ ಪಾಕಿಸ್ತಾನ ಅಭಿಮಾನಿಯೊಬ್ಬರು ಮನೆ ಮೇಲೆ ಬಾವುಟ ಹಾರಿಸಿ ಅಭಿಮಾನ ತೋರಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

ಇದೇ ಘಟನೆಯನ್ನು ನೆನಪಿಸುವಂತಹ ಘಟನೆಯೊಂದರ ಮಾಹಿತಿ ಇಲ್ಲಿದೆ ನೋಡಿ. ಏಷ್ಯಾಕಪ್ ಟಿ-20 ಕ್ರಿಕೆಟ್ ಪಂದ್ಯದಲ್ಲಿ ತಮ್ಮ ಅಭಿಮಾನಿಯಾಗಿರುವ ಪಾಕಿಸ್ತಾನದ ವ್ಯಕ್ತಿಯೊಬ್ಬರಿಗೆ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಪಂದ್ಯದ ಟಿಕೆಟ್ ಕೊಡಿಸಿದ್ದಾರೆ. ಧೋನಿ ಅವರ ಶ್ರೇಯಸ್ಸನ್ನು ಬಯಸುವ ಈ ಪಾಕಿಸ್ತಾನಿ ವ್ಯಕ್ತಿಯ ಹೆಸರು ಬಷೀರ್ ಚಾಚಾ. 62 ವರ್ಷದ ಬಷೀರ್ ಚಾಚಾ, ಭಾರತ ಮತ್ತು ಪಾಕಿಸ್ತಾನ ಧ್ವಜಗಳ ಕಲರ್ ಹೊಂದಿರುವ ಡ್ರೆಸ್ ಹಾಕಿಕೊಂಡು ಗಮನ ಸೆಳೆದರು.

ಬಾಂಗ್ಲಾದ ಮೀರ್ ಪುರ್ ದಲ್ಲಿ ನಡೆದ ಭಾರತ, ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಅವರು ಉಭಯ ತಂಡಗಳಿಗೂ ಪ್ರೋತ್ಸಾಹ ನೀಡಿದರು. ಅಂದ ಹಾಗೇ ಧೋನಿ ಅಭಿಮಾನಿಯಾಗಿದ್ದ ಬಷೀರ್ ಅವರಿಗೆ 2011 ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಿಕೆಟ್ ಕೊಡಿಸಿದ್ದರಂತೆ ಧೋನಿ. ಅಂದಿನಿಂದಲೂ ಅವರಿಗೆ ಧೋನಿಯೇ ಪಂದ್ಯದ ಟಿಕೆಟ್ ಕೊಡಿಸುತ್ತಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...