alex Certify
ಕನ್ನಡ ದುನಿಯಾ       Mobile App
       

Kannada Duniya

ತಂಡದಿಂದ ಯುವರಾಜ್ ಔಟ್–ರೋಹಿತ್ ಗೆ ಉಪ ನಾಯಕನ ಪಟ್ಟ

yuvraj-singh-instagram

ಶ್ರೀಲಂಕಾ ವಿರುದ್ಧ ನಡೆಯಲಿರುವ 5 ಏಕದಿನ ಪಂದ್ಯ ಹಾಗೂ ಒಂದು ಟಿ-20 ಪಂದ್ಯಕ್ಕೆ ಇಂಡಿಯಾ ಟೀಂ ಘೋಷಣೆಯಾಗಿದೆ. ಯುವರಾಜ್ ಸಿಂಗ್ ತಂಡದಿಂದ ಹೊರಗುಳಿದಿದ್ದಾರೆ. ಸರಣಿಯಲ್ಲಿ ರೋಹಿತ್ ಶರ್ಮಾ ಉಪ-ನಾಯಕನಾಗಿ ಆಯ್ಕೆಯಾಗಿದ್ದಾರೆ.

ಮೊಹಮ್ಮದ್ ಶಮಿ, ಉಮೇಶ್ ಯಾದವ್, ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಗೆ ವಿಶ್ರಾಂತಿ ನೀಡಲಾಗಿದೆ. ಬ್ಯಾಟ್ಸ್ ಮನ್ ಕೆ.ಎಲ್. ರಾಹುಲ್ ತಂಡಕ್ಕೆ ವಾಪಸ್ಸಾಗಿದ್ದಾರೆ.

ಶ್ರೀಲಂಕಾ ವಿರುದ್ಧ 5 ಏಕದಿನ ಪಂದ್ಯ ನಡೆಯಲಿದ್ದು, ಆಗಸ್ಟ್ 20ರಂದು ಮೊದಲ ಪಂದ್ಯ ನಡೆಯಲಿದೆ. ಎರಡನೇ ಪಂದ್ಯ 24,ಮೂರನೇ ಪಂದ್ಯ 27, ನಾಲ್ಕನೇ ಪಂದ್ಯ 31 ಹಾಗೂ ಐದನೇ ಪಂದ್ಯ ಸೆಪ್ಟೆಂಬರ್ 3ರಂದು ನಡೆಯಲಿದೆ. ಇದ್ರ ಜೊತೆಗೆ ಶ್ರೀಲಂಕಾ ವಿರುದ್ಧ ಭಾರತ ಒಂದು ಟಿ-ಟ್ವೆಂಟಿ ಪಂದ್ಯವನ್ನಾಡಲಿದೆ.

ಇಂಡಿಯಾ ಟೀಂ ಹೀಗಿದೆ : ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ( ಉಪ ನಾಯಕ), ಲೋಕೇಶ್ ರಾಹುಲ್, ಮನೀಷ್ ಪಾಂಡೆ, ಅಜಿಂಕ್ಯ ರಹಾನೆ, ಕೇದಾರ್ ಜಾಧವ್, ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ, ಅಕ್ಷಯ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಜಸ್ ಪ್ರೀತ್ ಭೂಮ್ರಾ, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...