alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸುಂದರ ಟಿವಿ ಆಂಕರ್ ಕ್ರಿಕೆಟರ್ ಪ್ರೇಯಸಿ

rahul6

ಭಾರತ ಕ್ರಿಕೆಟ್ ತಂಡದ ಸ್ಟಾರ್, ಆರಂಭಿಕ ಆಟಗಾರ ಲೋಕೇಶ್ ರಾಹುಲ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಉತ್ತಮ ಆಟವಾಡ್ತಿರುವ ರಾಹುಲ್ ಮನೆಮಾತಾಗಿದ್ದಾರೆ. 25 ವರ್ಷದ ರಾಹುಲ್ ಈವರೆಗೆ 18 ಟೆಸ್ಟ್ ಪಂದ್ಯದ 29 ಇನ್ನಿಂಗ್ಸ್ ನಲ್ಲಿ 1257 ರನ್ ಗಳಿಸಿದ್ದಾರೆ.

ಟೆಸ್ಟ್ ವೃತ್ತಿ ಜೀವನದಲ್ಲಿ ರಾಹುಲ್ ಈವರೆಗೆ 8 ಅರ್ಧಶತಕ ಹಾಗೂ 4 ಶತಕ ಸಿಡಿಸಿದ್ದಾರೆ. ಟೆಸ್ಟ್ ನಲ್ಲಿ ರಾಹುಲ್ ಬೆಸ್ಟ್ ರೆಕಾರ್ಡ್ 199 ರನ್.  ಈವರೆಗೆ 6 ಏಕದಿನ ಪಂದ್ಯಗಳನ್ನಾಡಿರುವ ರಾಹುಲ್ ಒಂದು ಅರ್ಧ ಶತಕದ ಜೊತೆ 220 ರನ್ ಗಳಿಸಿದ್ದಾರೆ. 8 ಟಿ-ಟ್ವೆಂಟಿ ಪಂದ್ಯಗಳನ್ನು ಆಡಿರುವ ರಾಹುಲ್ ಒಂದು ಶತಕ ಸಿಡಿಸಿದ್ದಾರೆ.

ನಾವು ಇಂದು ಹೇಳ್ತಿರೋದು ರಾಹುಲ್ ವೃತ್ತಿ ಜೀವನದ ಬಗ್ಗೆಯಲ್ಲ. ಖಾಸಗಿ ಬದುಕಿನ ಬಗ್ಗೆ. 25 ವರ್ಷದ ರಾಹುಲ್ ಗರ್ಲ್ ಫ್ರೆಂಡ್ ಹೊಂದಿದ್ದಾರೆ. ರಾಹುಲ್ ಗರ್ಲ್ ಫ್ರೆಂಡ್ ಟಿವಿ ಆ್ಯಂಕರ್. ಅವರ ಹೆಸ್ರು ಎಲಿಕ್ಸಿರ್ ನಹರ್.

ಎಲಿಕ್ಸಿರ್ ನಹರ್ ಮಾಡೆಲಿಂಗ್ ಜೊತೆ ಫುಟ್ಬಾಲ್ ಕ್ಲಬ್ ನ ಟಿವಿ ಚಾನೆಲ್ ನಲ್ಲಿ ಆ್ಯಂಕರಿಂಗ್ ಮಾಡ್ತಾರೆ. ಆ್ಯಂಕರ್ ಗರ್ಲ್ ಫ್ರೆಂಡ್ ಜೊತೆ ರಾಹುಲ್ ಅನೇಕ ಬಾರಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಎಲಿಕ್ಸಿರ್ ನಹರ್ ಜೊತೆಗಿರುವ ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿ ಆಗಾಗ ಸುದ್ದಿಯಲ್ಲಿರುತ್ತಾರೆ ರಾಹುಲ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...