alex Certify
ಕನ್ನಡ ದುನಿಯಾ       Mobile App
       

Kannada Duniya

ಆಸಿಸ್ ಬೌಲರ್ ಗಳನ್ನು ಚೆಂಡಾಡಿದ ಕೊಹ್ಲಿ

Virat-Koh

ಮೊಹಾಲಿಯಲ್ಲಿ ನಡೆದ ಐಸಿಸಿ ವಿಶ್ವಕಪ್ ಟಿ-20 ಪಂದ್ಯದಲ್ಲಿ, ಆಸ್ಟ್ರೇಲಿಯಾವನ್ನು ಬಗ್ಗು ಬಡಿದ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದೆ. ಭಾರತ ತಂಡದ ಸ್ಪೋಟಕ ಬ್ಯಾಟ್ಸ್ ಮೆನ್ ವಿರಾಟ್ ಕೊಹ್ಲಿ ಅಮೋಘ ಆಟದ ನೆರವಿನಿಂದ, ಟೀಂ ಇಂಡಿಯಾ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಕಂಡಿತು.

ಮೊದಲಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗಧಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು. ಕ್ವಾಜಾ 26, ಫಿಂಚ್ 43, ಮ್ಯಾಕ್ಸ್ ವೆಲ್ 31 ಹಾಗೂ ವ್ಯಾಟ್ಸನ್ 18 ರನ್ ಗಳಿಸಿದರು. ಭಾರತದ ಪರವಾಗಿ ಹಾರ್ದಿಕ್ ಪಾಂಡ್ಯ 2, ನೆಹ್ರಾ, ಬೂಮ್ರಾ, ಅಶ್ವಿನ್ ಹಾಗೂ ಯುವರಾಜ್ ಸಿಂಗ್ ತಲಾ 1 ವಿಕೆಟ್ ಗಳಿಸಿದರು. ಆಸ್ಟ್ರೇಲಿಯಾ ನೀಡಿದ 161 ರನ್ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಭಾರತದ ಪರವಾಗಿ ಶಿಖರ್ ಧವನ್ 13, ರೋಹಿತ್ ಶರ್ಮ 12 ರನ್ ಗಳಿಸಿದರು.

ಪಂದ್ಯಕ್ಕೆ ತಿರುವು ನೀಡಿದ್ದು, ವಿರಾಟ್ ಕೊಹ್ಲಿ ಹೊಡಿ ಬಡಿ ಆಟ. ಬರೋಬ್ಬರಿ 9 ಬೌಂಡರಿ, 2 ಸಿಕ್ಸರ್ ಸಿಡಿಸಿದ ವಿರಾಟ್ ಕೊಹ್ಲಿ ಆಸೀಸ್ ಬೌಲರ್ ಗಳ ಬೆವರಿಳಿಸಿದರು. ಕೊಹ್ಲಿ 82 ರನ್ ಗಳಿಸಿ ಅಜೇಯರಾಗುಳಿದರು. ಯುವರಾಜ್ ಸಿಂಗ್ 21 ಹಾಗೂ ಮಹೇಂದ್ರ ಸಿಂಗ್ ಧೋನಿ ಅಜೇಯ 16 ರನ್ ಗಳಿಸಿದರು.

ಕೊಹ್ಲಿ ಅಮೋಘ ಆಟದ ನೆರವಿನಿಂದ ಭಾರತ 6 ವಿಕೆಟ್ ಗಳಿಂದ ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿದರೆ, ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿದ್ದಿದೆ. ಆಸೀಸ್ ಪರವಾಗಿ ಶೇನ್ ವಾಟ್ಸನ್ 2, ಫಾಕ್ನರ್, ನೈಟ್ ತಲಾ 1 ವಿಕೆಟ್ ಪಡೆದರು. 5 ಎಸೆತ ಬಾಕಿ ಇರುವಾಗಲೇ ಭಾರತ ಗೆಲವು ಕಂಡಿದ್ದು, ದೇಶಾದ್ಯಂತ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...