alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಕನ್ನರ ಮಣಿಸಿದ ಭಾರತಕ್ಕೆ ಟಿ-20 ಸರಣಿ

THIRD_T20_2735604f

ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿರುವಂತೆಯೇ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಹುಮ್ಮಸ್ಸು ಮೂಡಿದೆ. ಶ್ರೀಲಂಕಾ ತಂಡವನ್ನು ಸುಲಭವಾಗಿ ಮಣಿಸಿದ ಭಾರತ ಟಿ-20 ಸರಣಿಯನ್ನು ವಶಪಡಿಸಿಕೊಂಡಿದೆ. ವಿಶಾಖಪಟ್ಟಣದಲ್ಲಿ ನಡೆದ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಭರ್ಜರಿ ಗೆಲುವು ಸಂಪಾದಿಸಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಆಟಗಾರರು ಸ್ಪಿನ್ ಮೋಡಿಗೆ ತರಗೆಲೆಗಳಂತೆ ಉರುಳಿದರು. ಅಶ್ವಿನ್ ಸ್ಪಿನ್ ಮೋಡಿಗೆ ಲಂಕಾ ಆಟಗಾರರು 18 ಓವರ್ ಗಳಿಗೆ ಆಲ್ ಔಟ್ ಆದರು. ದಾಸುನ್ ಶನಕ 19, ತಿಸಾರ ಪೆರೆರಾ 12 ರನ್ ಗಳಿಸಿದರು. ಭಾರತದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಅಶ್ವಿನ್ 8 ರನ್ ಗೆ 4 ವಿಕೆಟ್ ಗಳಿಸಿದರು. ಸುರೇಶ್ ರೈನಾ 6 ರನ್ ಗಳಿಗೆ 2 ವಿಕೆಟ್ ಪಡೆದರು. 83 ರನ್ ಗಳ ಗೆಲುವಿನ ಗುರಿ ಬೆನ್ನತ್ತಿ ಭಾರತ 1 ವಿಕೆಟ್ ಕಳೆದುಕೊಂಡು 13.5 ಓವರ್ ಗಳಲ್ಲಿ ಗೆಲವು ಸಾಧಿಸಿತು.

ತಂಡದ ಮೊತ್ತ 29 ರನ್ ಆಗಿದ್ದಾಗ 13 ರನ್ ಗಳಿಸಿದ್ದ ರೋಹಿತ್ ಶರ್ಮ ಔಟಾದರು. ಶಿಖರ್ ಧವನ್ ಭರ್ಜರಿ ಆಟವಾಡಿ ಅಜೇಯ 46 ರನ್ ಗಳಿಸಿದರೆ, ಅಜಿಂಕ್ಯ ರೆಹಾನೆ ಅಜೇಯ 12 ರನ್ ಗಳಿಸಿದರು. ಇನ್ನೂ 37 ಎಸೆತ ಬಾಕಿ ಇರುವಂತೆಯೇ ಭಾರತ ಗೆಲುವಿನ ನಗೆ ಬೀರಿತು. ಸರಣಿಯನ್ನು 2-1 ಅಂತರದಿಂದ ಜಯಿಸಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...