alex Certify
ಕನ್ನಡ ದುನಿಯಾ       Mobile App
       

Kannada Duniya

ಹೈ ವೋಲ್ಟೇಜ್ ಮ್ಯಾಚ್ ನಲ್ಲಿ ಪಾಕ್ ಬಗ್ಗುಬಡಿದ ಧೋನಿ ಬಾಯ್ಸ್

india-pakistan-cricket-series

ಮೀರ್ ಪುರ್: ಬಾಂಗ್ಲಾದೇಶದ ಮೀರ್ ಪುರ್ ನಲ್ಲಿ ನಡೆದ ಏಷ್ಯಾಕಪ್ ಟಿ-20 ಕ್ರಿಕೆಟ್ ಸರಣಿಯಲ್ಲಿ ಬಾಂಗ್ಲಾ ವಿರುದ್ಧ ಮೊದಲ ಪಂದ್ಯವನ್ನು ಗೆದ್ದಿದ್ದ ಭಾರತ ತಂಡದ ಆಟಗಾರರು ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗು ಬಡಿದಿದ್ದಾರೆ.

ಪಾಕಿಸ್ತಾನ ನೀಡಿದ ಗುರಿಯನ್ನು ಬೆನ್ನಟ್ಟಿದ ಭಾರತ 15.3 ಓವರ್ ಗಳಲ್ಲಿ ಗೆಲುವಿನ ನಗೆ ಬೀರಿತು. ಪಾಕಿಸ್ತಾನ ಮೊದಲಿಗೆ ಬ್ಯಾಟಿಂಗ್ ಮಾಡಿ 17.3 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 83 ರನ್ ಗಳಿಸಿತ್ತು. ಹಫೀಜ್ 4ರನ್, ಶೇರ್ ಜಿಲ್ ಖಾನ್ 7, ಖುರಾಂ 10, ಶೋಯಬ್ ಮಲಿಕ್ 4, ಉಮರ್ ಅಕ್ಮಲ್ 3, ನಾಯಕ ಶಾಹೀದ್ ಆಫ್ರೀದಿ 2, ಸಮಿ 8 ಹಾಗೂ ಸರ್ಫ್ರಾಜ್ 25 ರನ್ ಗಳಿಸಿದರು. ಪಾಕಿಸ್ತಾನದ 9 ಆಟಗಾರರು ಒಂದಂಕಿ ದಾಟಲಿಲ್ಲ. ಭಾರತದ ಬೌಲರ್ ಗಳು ಕರಾರುವಕ್ಕಾದ ದಾಳಿ ನಡೆಸಿದರು.

ಹಾರ್ದಿಕ್ ಪಾಂಡ್ಯ 3, ಜಡೇಜಾ 2, ಯುವರಾಜ್ ಸಿಂಗ್, ನೆಹ್ರಾ, ಬೂಮ್ರಾ ತಲಾ ಒಂದು ವಿಕೆಟ್ ಪಡೆದರು. 84 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಭಾರತ, 15.3 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 85 ರನ್ ಗಳಿಸಿತು ವಿರಾಟ್ ಕೊಹ್ಲಿ 49 ರನ್, ಯುವರಾಜ್ ಅಜೇಯ 14, ರೋಹಿತ್ 7 ರನ್ ಗಳಿಸಿದರು. ಪಾಕ್ ಪರ ಅಮೀರ್ 3 ಹಾಗೂ ಸಮಿ 2 ವಿಕೆಟ್ ಪಡೆದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...