alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸಂಗತಿಯಲ್ಲಿ ಸಚಿನ್-ಧೋನಿಗಿಂತ ಮುಂದಿದ್ದಾರೆ ಉತ್ತಪ್ಪ

ಕ್ರಿಕೆಟರ್ ರಾಬಿನ್ ಉತ್ತಪ್ಪ ಈ ಒಂದು ವಿಷ್ಯದಲ್ಲಿ ಸಮಕಾಲೀನರೊಂದೇ ಅಲ್ಲ ಪೂರ್ವ ಕ್ರಿಕೆಟ್ ಆಟಗಾರರನ್ನು ಹಿಂದಿಕ್ಕಿದ್ದಾರೆ.  ಈ ವರ್ಷ ಅಕ್ಟೋಬರ್ 11ರಂದು ಉತ್ತಪ್ಪ ಹಾಗೂ ಪತ್ನಿ ಶೀತಲ್ ಜೀವನದಲ್ಲಿ ಹೊಸ ವ್ಯಕ್ತಿಯ ಆಗಮನವಾಗಿದೆ. ಶೀತಲ್ ಮಗುವಿಗೆ ಜನ್ಮ ನೀಡಿದ್ದಾರೆ. ಶೀತಲ್ ಗರ್ಭಿಣಿಯಾದಾಗಿನಿಂದ ಹೆರಿಗೆಯವರೆಗೆ ಸದಾ ಪತ್ನಿ ಜೊತೆಗಿದ್ದ ಉತ್ತಪ್ಪ ಪರ್ಫೆಕ್ಟ್ ಪತಿ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಶೀತಲ್ ಗರ್ಭಿಣಿಯಾದ ನಂತ್ರ ಉತ್ತಪ್ಪ ಐಪಿಎಲ್ ಹೊರತುಪಡಿಸಿ ಮತ್ಯಾವ ಪಂದ್ಯವನ್ನೂ ಆಡಿಲ್ಲ. ಸದಾ ಪತ್ನಿ ಸಹಾಯಕ್ಕೆ ನಿಂತಿದ್ದ ಉತ್ತಪ್ಪ, ಶೀತಲ್ ಗರ್ಭಿಣಿಯಾದಾಗ ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕ್ತಿದ್ದ ಉತ್ತಪ್ಪ ತಮ್ಮ ಪ್ರೀತಿಯನ್ನು ಪತ್ನಿ ಮುಂದಿಡುತ್ತಿದ್ದರು. ಪತ್ನಿಗೆ ಗರ್ಭಿಣಿ ಹಾಗೂ ಹೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಪುಸ್ತಕ ಬರೆಯುವಂತೆ ಉತ್ತಪ್ಪ ಸಲಹೆ ನೀಡಿದ್ದಾರಂತೆ.

ಶೀತಲ್ ಗರ್ಭಿಣಿಯಾದಾಗ ಅವರ ಜೊತೆ ಉತ್ತಪ್ಪ ಕೂಡ ವ್ಯಾಯಾಮ ಮಾಡ್ತಿದ್ದರು. ಮಗು ಜನಿಸಿದ ನಂತ್ರ ಈ ಖುಷಿಯನ್ನೂ ಉತ್ತಪ್ಪ ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ನಿಯಾಲ್ ನೋಲನ್ ಉತ್ತಪ್ಪ ಎಂದು ಮಗನಿಗೆ ಹೆಸರಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...