alex Certify
ಕನ್ನಡ ದುನಿಯಾ       Mobile App
       

Kannada Duniya

ಒಲಂಪಿಕ್ಸ್ ನಲ್ಲೂ ಮಿಂಚಲಿದೆ ಕ್ರಿಕೆಟ್..!

Performers play cricket during the opening ceremony of the London 2012 Olympic Games on July 27, 2012 at the Olympic stadium in London. AFP PHOTO / MARK RALSTON (Photo credit should read MARK RALSTON/AFP/GettyImages)

ಎಡಿನ್ ಬರ್ಗ್: ವಿಶ್ವದ ಶ್ರೀಮಂತ ಕ್ರೀಡೆಗಳಲ್ಲಿ ಒಂದಾಗಿರುವ ಕ್ರಿಕೆಟ್ ಒಲಂಪಿಕ್ಸ್ ನಲ್ಲಿ ಕಾಣಸಿಗುವುದಿಲ್ಲ. ಮುಂಬರುವ 2024ರ ಒಲಂಪಿಕ್ಸ್ ರೋಮ್ ನಲ್ಲಿ ನಡೆಯುವ ಸಾಧ್ಯತೆ ಇದ್ದು, ಒಂದು ವೇಳೆ ಆತಿಥ್ಯ ವಹಿಸುವ ಅವಕಾಶ ಸಿಕ್ಕರೆ, ಕ್ರಿಕೆಟ್ ಗೂ ಅವಕಾಶ ನೀಡಲಾಗುವುದು ಎನ್ನಲಾಗಿದೆ.

ಇಟಲಿ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸಿಮೊನೆ ಗ್ಯಾಂಬಿನೊ ಈ ವಿಷಯ ತಿಳಿಸಿದ್ದು, ಒಂದು ವೇಳೆ 2024 ರ ಒಲಂಪಿಕ್ಸ್ ಆತಿಥ್ಯ ರೋಮ್ ಗೆ ದೊರೆತರೆ, ಕ್ರಿಕೆಟ್ ಆಟಕ್ಕೆ ಅವಕಾಶ ಕಲ್ಪಿಸಲಾಗುವುದೆಂದು ತಿಳಿಸಿದ್ದಾರೆ. ಪ್ಯಾರಿಸ್, ಲಾಸ್ ಏಂಜಲೀಸ್ ಹಾಗೂ ಬುಡಾಪೆಸ್ಟ್ ಜೊತೆಗೆ ರೋಮ್ ಕೂಡ 2024ರ ಒಲಂಪಿಕ್ಸ್ ಆತಿಥ್ಯ ವಹಿಸಿಕೊಳ್ಳಲು ಬಿಡ್ ಸಲ್ಲಿಸಿವೆ. ಆತಿಥ್ಯ ವಹಿಸಿಕೊಳ್ಳಲಿರುವ ನಗರಕ್ಕೆ 5 ಹೊಸ ಕ್ರೀಡೆಗಳನ್ನು ಒಲಂಪಿಕ್ಸ್ ಗೆ ಸೇರಿಸಿಕೊಳ್ಳುವ ಅವಕಾಶವಿದ್ದು, ಒಂದು ವೇಳೆ ರೋಮ್ ಗೆ ಅವಕಾಶ ಸಿಕ್ಕರೆ, ಕ್ರಿಕೆಟ್ ಕೂಡ ಒಲಂಪಿಕ್ಸ್ ಗೆ ಸೇರ್ಪಡೆಯಾಗಲಿದೆ.

ಎಡಿನ್ ಬರ್ಗ್ ನಲ್ಲಿ ಐ.ಸಿ.ಸಿ. ವಾರ್ಷಿಕ ಸಮ್ಮೇಳನ ನಡೆಯುತ್ತಿದ್ದು, ಈ ಸಂದರ್ಭದಲ್ಲೇ ಇಟಲಿ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸಿಮೊನೆ ಗ್ಯಾಂಬಿನೊ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ರೋಮ್ ನಲ್ಲಿ ಒಲಂಪಿಕ್ಸ್ ನಡೆದರೆ, ಕ್ರಿಕೆಟ್ ಕೂಡ ಎಂಟ್ರಿ ಕೊಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...