alex Certify
ಕನ್ನಡ ದುನಿಯಾ       Mobile App
       

Kannada Duniya

ವಿನೂತನ ದಾಖಲೆ ಬರೆದ ವಿರಾಟ್ ಕೊಹ್ಲಿ

virat-kohli-hit-wicket

ರಾಜ್ ಕೋಟ್: ಟೀಂ ಇಂಡಿಯಾ ಟೆಸ್ಟ್ ಪಂದ್ಯಗಳ ನಾಯಕರಾಗಿರುವ ವಿರಾಟ್ ಕೊಹ್ಲಿ, ‘ಹಿಟ್ ವಿಕೆಟ್’ ಆಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 40 ರನ್ ಗಳಿಸಿದ್ದ ಸಂದರ್ಭದಲ್ಲಿ ಅವರು ಹಿಟ್ ವಿಕೆಟ್ ಆಗಿ ಔಟಾಗಿದ್ದಾರೆ. ಆದಿಲ್ ರಶೀದ್ ಬೌಲಿಂಗ್ ಮಾಡುವಾಗ, ವಿರಾಟ್ ಕೊಹ್ಲಿ ಕಾಲು ವಿಕೆಟ್ ಗೆ ತಾಗಿ ಬೇಲ್ಸ್ ಬಿದ್ದಿದೆ. ಸ್ವಯಂಕೃತ ಅಪರಾಧವೆಂಬಂತೆ ಕೊಹ್ಲಿ ಹಿಟ್ ವಿಕೆಟ್ ಆಗಿದ್ದಾರೆ. 2002 ರಲ್ಲಿ ಟೀಂ ಇಂಡಿಯಾ ಆಟಗಾರ ವಿ.ವಿ.ಎಸ್. ಲಕ್ಷ್ಮಣ್ ಇದೇ ರೀತಿ ಔಟಾಗಿದ್ದರು.

1949 ರಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದ ಲಾಲಾ ಅಮರ್ ನಾಥ್ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹಿಟ್ ವಿಕೆಟ್ ಆಗಿದ್ದು, ಆದಾದ ನಂತರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಿಟ್ ವಿಕೆಟ್ ಆಗಿದ್ದಾರೆ. ಈ ಮೂಲಕ ವಿನೂತನ ದಾಖಲೆಯೊಂದನ್ನು ಮಾಡಿದ್ದಾರೆ. ಇದುವರೆಗೆ 22 ಭಾರತೀಯ ಬ್ಯಾಟ್ಸ್ ಮನ್ ಗಳು ಟೆಸ್ಟ್ ನಲ್ಲಿ ಹಿಟ್ ವಿಕೆಟ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...