alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂದಿನ ವರ್ಷ ಈ ದಿನಾಂಕದಂದು ನಡೆಯಲಿದೆ ಐಪಿಎಲ್

ಐಪಿಎಲ್ -11 ಮುಕ್ತಾಯಗೊಂಡಿದೆ. ಚೆನ್ನೆ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈಗ ಬಿಸಿಸಿಐಗೆ 2019 ರ ಐಪಿಎಲ್ ಚಿಂತೆ ಶುರುವಾಗಿದೆ. ಮುಂದಿನ ವರ್ಷ ಏಪ್ರಿಲ್ ನಲ್ಲಿ ಐಪಿಎಲ್ ಶುರುವಾಗೋದಿಲ್ಲ. ಇದಕ್ಕೆ ಎರಡು ಮಹತ್ವದ ಕಾರಣಗಳಿವೆ.

ಮೇ 30 ರಿಂದ ಐಸಿಸಿ ವಿಶ್ವಕಪ್ ಶುರುವಾಗಲಿದೆ. ಲೋಕಸಭೆ ಚುನಾವಣೆ ಕೂಡ ನಡೆಯಲಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡಿರುವ ಬಿಸಿಸಿಐ ಏಪ್ರಿಲ್ ನಲ್ಲಿ ಐಪಿಎಲ್ ಶುರು ಮಾಡದಿರಲು ನಿರ್ಧರಿಸಿದೆ. ಮಾರ್ಚ್ 29ರಂದು ಐಪಿಎಲ್ ಪಂದ್ಯ ಶುರುವಾಗುವ ಸಾಧ್ಯತೆಯಿದೆ.

ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ಮಾರ್ಚ್ ನಿಂದ ಮೇ ಒಳಗೆ ನಡೆಯಲಿದೆ. ಹಾಗಾಗಿ ಐಪಿಎಲ್ ಪಂದ್ಯಾವಳಿಗಳು ಭಾರತದಿಂದ ಹೊರಗೆ ನಡೆಯುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ 2009 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹಾಗೂ 2014ರಲ್ಲಿ 16 ಪಂದ್ಯಗಳನ್ನು ಯುಎಇಯಲ್ಲಿ ನಡೆಸಲಾಗಿತ್ತು.

ಒಂದು ಮೂಲದ ಪ್ರಕಾರ ಈ ವರ್ಷಾಂತ್ಯದಲ್ಲಿಯೇ ಸಾರ್ವತ್ರಿಕ ಚುನಾವಣೆ ನಡೆಯುವ ಸಾಧ್ಯತೆಯಿದೆ. ಹೀಗಾದಲ್ಲಿ ಐಪಿಎಲ್ ಪಂದ್ಯಗಳು ಭಾರತದಲ್ಲಿಯೇ ನಡೆಯಲಿದ್ದು, ಸುರಕ್ಷತೆಗೆ ಯಾವುದೇ ಧಕ್ಕೆಯಾಗುವುದಿಲ್ಲ. ಐಪಿಎಲ್ ಹಾಗೂ ಉಳಿದ ಪಂದ್ಯಗಳ ಮಧ್ಯೆ 15 ದಿನಗಳ ಅಂತರವಿರಬೇಕು. ಜೊತೆಗೆ ಕನಿಷ್ಠ 15 ದಿನಗಳ ಮೊದಲು ತಂಡದ ಸದಸ್ಯರು ಹಾಜರಿರಬೇಕು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಿಸಿಸಿಐ, ಐಪಿಎಲ್ ವೇಳಾಪಟ್ಟಿ ಸಿದ್ಧಪಡಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...