alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮಗೆ ಗೊತ್ತಿಲ್ಲದ ಕ್ರಿಕೆಟ್ ಲೋಕದ ಅಚ್ಚರಿಯ ಸಂಗತಿ….

sachin

ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆ. ಮೈದಾನದಲ್ಲಿ ಸಾಕಷ್ಟು ಕುತೂಹಲಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಅವುಗಳಲ್ಲಿ ಎಷ್ಟೋ ಸಂಗತಿಗಳು ನಮಗೆ ತಿಳಿದಿರುವುದಿಲ್ಲ. ಅಂಥದ್ದೇ ಕೆಲವು ಇಂಟ್ರೆಸ್ಟಿಂಗ್ ಸತ್ಯಗಳು ಯಾವುವು ಅನ್ನೋದನ್ನು ನೋಡೋಣ.

ಭಾರತಕ್ಕೂ ಮೊದಲು ಪಾಕ್ ಪರ ಆಡಿದ್ದರು ಸಚಿನ್ : ಹೌದು ಅಚ್ಚರಿಯಾದ್ರೂ ಇದು ಸತ್ಯ. ಬ್ರಬೌರ್ನ್ ಮೈದಾನದಲ್ಲಿ 1987 ರಲ್ಲಿ ಭಾರತ – ಪಾಕಿಸ್ತಾನ ನಡುವೆ ಅಭ್ಯಾಸ ಪಂದ್ಯ ನಡೆದಿತ್ತು. ಈ ವೇಳೆ ಸಚಿನ್ ತೆಂಡೂಲ್ಕರ್ ಬದಲಿ ಆಟಗಾರನಾಗಿ ಪಾಕ್ ತಂಡದ ಪರ ಫೀಲ್ಡಿಂಗ್ ನಲ್ಲಿ ಕಾಣಿಸಿಕೊಂಡಿದ್ರು.

ಹುಟ್ಟಿದ ದಿನಾಂಕ, ಗಳಿಸಿದ ರನ್ ಎರಡೂ ಒಂದೇ : ಇಂಗ್ಲೆಂಡ್ ನ ವಿಕೆಟ್ ಕೀಪರ್ ಆಗಿದ್ದ ಅಲೆಕ್ ಜೇಮ್ಸ್ ಸ್ಟಿವರ್ಟ್ ಜನಿಸಿದ್ದು 8-4-63 ರಂದು. 133 ಪಂದ್ಯಗಳಿಂದ ಅವರು ಗಳಿಸಿದ ರನ್ ಕೂಡ 8463.

ಲಾರ್ಡ್ಸ್ ಗೆಲುವಿನಲ್ಲಿ ಸಾಮ್ಯತೆ : ಭಾರತ ಲಾರ್ಡ್ಸ್ ನಲ್ಲಿ ಮೊದಲ ಟೆಸ್ಟ್ ಗೆದ್ದಿದ್ದು 1986ರಲ್ಲಿ, ಅಂದ್ರೆ 1983ರ ವಿಶ್ವಕಪ್ ಗೆದ್ದು 3 ವರ್ಷಗಳ ನಂತರ. 2011ರ ವಿಶ್ವಕಪ್ ಗೆದ್ದು 3 ವರ್ಷಗಳ ನಂತರ 2014ರಲ್ಲೂ ಟೀಂ ಇಂಡಿಯಾ ಲಾರ್ಡ್ಸ್ ನಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತ್ತು.

ಶೇನ್ ವಾರ್ನ್ ಗಿಂತ್ಲೂ ಹೆಚ್ಚು ವಿಕೆಟ್ ಪಡೆದಿದ್ದಾರೆ ಜಯಸೂರ್ಯ : ಏಕದಿನ ಪಂದ್ಯಗಳಲ್ಲಿ ಸನತ್ ಜಯಸೂರ್ಯ 323 ವಿಕೆಟ್ ಕಬಳಿಸಿದ್ದಾರೆ. ಆದ್ರೆ ಆಸೀಸ್ ನ ಶೇನ್ ವಾರ್ನ್ 194 ಪಂದ್ಯಗಳಿಂದ 293 ವಿಕೆಟ್ ಪಡೆದಿದ್ದಾರೆ.

ಇಂಜಮಾಮ್ ಉಲ್ ಹಕ್ ವಿಶಿಷ್ಟ ದಾಖಲೆ : ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಬೌಲಿಂಗ್ ಮಾಡಿದಾಗಲೆಲ್ಲ ಮೊದಲ ಬಾಲ್ ನಲ್ಲೇ ವಿಕೆಟ್ ಪಡೆದಿದ್ದಾರೆ.

ಬರ್ತಡೇ ದಿನವೇ ಹ್ಯಾಟ್ರಿಕ್ : ಹುಟ್ಟುಹಬ್ಬದ ದಿನದಂದೇ ಹ್ಯಾಟ್ರಿಕ್ ಪಡೆದವರು ಆಸ್ಟ್ರೇಲಿಯಾದ ಪೀಟರ್ ಸಿಡಲ್. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಮ್ಯಾಚ್ ನಲ್ಲಿ ಈ ಸಾಧನೆ ಮಾಡಿದ್ದಾರೆ.

ಜಯವರ್ಧನೆ ಸಾಧನೆ : ವಿಶ್ವಕಪ್ ಫೈನಲ್ ಮತ್ತು ಸೆಮಿಫೈನಲ್ ನಲ್ಲಿ ಶತಕ ಬಾರಿಸಿದ ಏಕೈಕ ಆಟಗಾರ ಶ್ರೀಲಂಕಾದ ಮಹೇಲಾ ಜಯವರ್ಧನೆ. 2007 ಮತ್ತು 2011ರಲ್ಲಿ ಈ ಸಾಧನೆ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ ರನ್ನು ಹಿಂದಿಕ್ಕಿದ ವಸೀಂ ಅಕ್ರಂ : ಟೆಸ್ಟ್ ನಲ್ಲಿ ಸಚಿನ್ ತೆಂಡೂಲ್ಕರ್ ಗಿಂತ್ಲೂ, ಪಾಕಿಸ್ತಾನದ ವಸೀಂ ಅಕ್ರಂ ಅತಿ ಹೆಚ್ಚು ರನ್ ಗಳಿಸಿದ್ದಾರೆ. ತೆಂಡೂಲ್ಕರ್ ಹೈಯೆಸ್ಟ್ ಸ್ಕೋರ್ 248 ಆಗಿದ್ದು, ವಸೀಂ ಅಕ್ರಂ 257 ರನ್ ಗಳಿಸಿದ್ದರು.

ರನ್, ಫಲಿತಾಂಶ ಸೇಮ್ ಸೇಮ್ : 1986 ಮತ್ತು 2014ರಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಣ ಪಂದ್ಯದ ಫಲಿತಾಂಶ ಒಂದೇ ತೆರನಾಗಿತ್ತು. 1986ರಲ್ಲೂ ಭಾರತ 245 ರನ್ ಗಳಿಸಿತ್ತು, 1 ರನ್ ನಿಂದ್ ಪಾಕ್ ಜಯ ಸಾಧಿಸಿತ್ತು. 2014ರಲ್ಲೂ ಭಾರತ ಗಳಿಸಿದ್ದು 245 ರನ್, ಪಾಕಿಸ್ತಾನಕ್ಕೆ 1 ರನ್ ಗೆಲುವು ದೊರೆತಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...