alex Certify
ಕನ್ನಡ ದುನಿಯಾ       Mobile App
       

Kannada Duniya

‘ಎಲ್ಲಾ ಬಾಲ್ ಗೂ ಹೆಲಿಕಾಪ್ಟರ್ ಶಾಟ್ ಹೊಡೆಯಕ್ಕಾಗಲ್ಲ’

MS Dhoni

‘ಸಾಗರದ ನೀರಿನಾಳದಲ್ಲ್ಲಿ ಹೆಲಿಕಾಪ್ಟರ್ ಹಾರಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಎಲ್ಲಾ ಬಾಲ್ ಗಳಿಗೂ ಹೆಲಿಕಾಪ್ಟರ್ ಶಾಟ್ ಹೊಡೆಯಲು ಆಗಲ್ಲ’ ಹೀಗೆಂದು ಹೇಳಿದ್ದು ಬೇರಾರು ಅಲ್ಲ, ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ.

ಭಾರತ ಸೀಮಿತ ಓವರ್ ಗಳ ಕ್ರಿಕೆಟ್ ತಂಡದ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿ, ಇತ್ತೀಚೆಗೆ ಹೆಲಿಕಾಪ್ಟರ್ ಹೊಡೆತ ಬಾರಿಸುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿದ ಧೋನಿ, ಬೌನ್ಸರ್ ಎಸೆತಗಳಿಗೆ ಸಿಕ್ಸರ್ ಬಾರಿಸಲು ಸಾಧ್ಯವಿಲ್ಲ. ನಾನು ಸಿಕ್ಸರ್ ಬಾರಿಸುತ್ತಿಲ್ಲ ಎಂಬ ಕಾರಣದಿಂದ, ನಿವೃತ್ತಿಯಾಗಬೇಕೆಂದು ಹೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ. ಬೌನ್ಸರ್ ಎಸೆತಗಳನ್ನು ಎದುರಿಸಿ ಸಿಕ್ಸರ್ ಬಾರಿಸಲು ಮೇಜಿನ ಮೇಲೆ ನಿಲ್ಲಬೇಕಾಗುತ್ತದೆ ಎಂದಿದ್ದಾರೆ.

ಹೆಲಿಕಾಪ್ಟರ್ ಶಾಟ್ ನಲ್ಲಿ ಧೋನಿ ಎತ್ತಿದ ಕೈ. ಅವರ ಆ ಆಟದ ಶೈಲಿಯನ್ನು ಕ್ರಿಕೆಟ್ ಪ್ರೇಮಿಗಳು ಇಷ್ಟಪಡುತ್ತಾರೆ. ಇತ್ತೀಚೆಗೆ ಅವರ ಸ್ಟೈಲ್ ಆಟ ಕಾಣುತ್ತಿಲ್ಲ. ಹಾಗಾಗಿ ತಮ್ಮ ಆಟದ ಶೈಲಿಯ ಬಗ್ಗೆ ಕೇಳಿಬಂದ ಅಭಿಪ್ರಾಯಗಳಿಗೆ ಅವರೇ ಉತ್ತರ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...