alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್ ತಂಡಕ್ಕೆ ನಿಮ್ಮ ವೆಚ್ಚವನ್ನು ನೀವೇ ಭರಿಸಿ ಎಂದ ಬಿಸಿಸಿಐ

Mumbai: England cricket team captain Alastair Cook arrives in bus at a hotel in Mumbai on Wednesday for the forthcoming test series. PTI Photo (PTI11_2_2016_000216B)

ಕಾನೂನು ಹೋರಾಟದ ಹಗ್ಗ ಜಗ್ಗಾಟದಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಎದುರು ಬಿಸಿಸಿಐ ಮುಜುಗರಕ್ಕೀಡಾಗಿದೆ. ಭಾರತ-ಇಂಗ್ಲೆಂಡ್ ನಡುವೆ 5 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದ್ದು, ಇಂಗ್ಲೆಂಡ್ ತಂಡ ಈಗಾಗ್ಲೇ ಮುಂಬೈಗೆ ಬಂದಿಳಿದಿದೆ. ನಿಯಮದಂತೆ ಸರಣಿಯ ಆತಿಥ್ಯ ವಹಿಸಿರುವ ಭಾರತ, ಇಂಗ್ಲೆಂಡ್ ಟೀಂಗೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಬೇಕು.

ಆದ್ರೆ ಈ ಬಾರಿ ಮಾತ್ರ ಹೋಟೆಲ್ ವಾಸ್ತವ್ಯದಿಂದ ಹಿಡಿದು ಎಲ್ಲದಕ್ಕೂ ಇಂಗ್ಲೆಂಡ್ ಆಟಗಾರರೇ ಹಣ ಖರ್ಚು ಮಾಡಬೇಕಾಗಿ ಬಂದಿದೆ. ಇಂಗ್ಲೆಂಡ್ ತಂಡದ ಮ್ಯಾನೇಜರ್ ಫಿಲ್ ನೀಲ್ ಅವರಿಗೆ ಪತ್ರ ಬರೆದಿರುವ ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ, ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿದ್ದು, ಅನಾನುಕೂಲತೆ ಬಗ್ಗೆ ಕ್ಷಮೆಯಾಚಿಸಿದ್ದಾರೆ. ನ್ಯಾಯಾಲಯದ ನಿರ್ಬಂಧವಿರುವುದರಿಂದ ಭಾರತೀಯ ಕ್ರಿಕೆಟ್ ಮಂಡಳಿ ಮತ್ತು ಇಸಿಬಿ ಎಂಓಯು ಜಾರಿ ಸಾಧ್ಯವಿಲ್ಲ. ಲೋಧಾ ಸಮಿತಿಯಿಂದ ಇನ್ನಷ್ಟು ಮಾಹಿತಿ ಕೇಳಿರುವ ಸುಪ್ರೀಂ ಕೋರ್ಟ್ ಹಣ ಬಳಕೆಗೆ ಅನುಮತಿ ನೀಡದೇ ಇರುವುದರಿಂದ ಇಂತಹ ಸಂದರ್ಭ ಎದುರಾಗಿದೆ ಅಂತಾ ಪತ್ರದಲ್ಲಿ ವಿವರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...