alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 29 ಎಸೆತದಲ್ಲಿ ಶರವೇಗದ ಶತಕ

29-ball-100-run-d

ಬೆಂಗಳೂರು: ಕೆ.ಎಸ್.ಸಿ.ಎ. ಟೂರ್ನಿಯಲ್ಲಿ ಆಂಧ್ರಪ್ರದೇಶ ಮೂಲದ ಪಲ್ಲಫ್ರೊಲು ರವೀಂದ್ರ ಅಪರೂಪದ ದಾಖಲೆ ಮಾಡಿದ್ದಾರೆ.

29 ಎಸೆತಗಳಲ್ಲಿ 100 ರನ್ ಗಳಿಸುವ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವೇಗದ ಶತಕ ದಾಖಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೆ.ಎಸ್.ಸಿ.ಎ. ಗ್ರೂಪ್ 1, 4 ನೇ ಡಿವಿಜನ್ ಲೀಗ್ ಪಂದ್ಯದಲ್ಲಿ ಸಿಟಿ ಜಿಮ್ಖಾನ ಕ್ರಿಕೆಟ್ ಕ್ಲಬ್ ಪ್ರತಿನಿಧಿಸಿದ್ದ ರವೀಂದ್ರ. ಜೈದೂರ್ ಕ್ರಿಕೆಟ್ ಕ್ಲಬ್ ವಿರುದ್ಧ ನಡೆದ ಪಂದ್ಯದಲ್ಲಿ 29 ಎಸೆತಗಳಲ್ಲಿ 100 ರನ್ ಬಾರಿಸಿದ್ದಾರೆ.

ಪಂದ್ಯದಲ್ಲಿ 58 ಎಸೆತಗಳನ್ನು ಎದುರಿಸಿದ ಅವರು 13 ಸಿಕ್ಸರ್, 7 ಬೌಂಡರಿ ಒಳಗೊಂಡ 144 ರನ್ ಸಿಡಿಸಿದ್ದಾರೆ. ಇವರ ಆಟದ ನೆರವಿನಿಂದ ಸಿಟಿ ಜಿಮ್ಖಾನ ತಂಡ 50 ಓವರ್ ಗಳಲ್ಲಿ 403 ರನ್ ಗಳಿಸಿದೆ. ಜೈದೂರ್ ತಂಡ 229 ರನ್ ಗೆ ಆಲ್ ಔಟ್ ಆಗಿ ಸೋಲು ಕಂಡಿದೆ.

ಭಾರತದ ವೇಗದ ಶತಕವೀರರು:

ಕೆ.ಎಲ್. ರಾಹುಲ್ ಅಂತರರಾಷ್ಟ್ರೀಯ ಟಿ 20 ಪಂದ್ಯದಲ್ಲಿ 46 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. ರಿಶಬ್ ಪಂತ್ ರಣಜಿ ಟೂರ್ನಿಯಲ್ಲಿ 48 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 52 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ.

ಕ್ರಿಕೆಟ್ ಲೋಕದ ವೇಗದ ಶತಕ:

ವೆಸ್ಟ್ ಇಂಡೀಸ್ ನ ಇರಾಕ್ ಥಾಮಸ್ ಟಿ 20 ಪಂದ್ಯದಲ್ಲಿ 21 ಎಸೆತಗಳಲ್ಲಿ 100 ರನ್ ಗಳಿಸಿದ್ದಾರೆ. ಕ್ರಿಕೆಟ್ ದಿಗ್ಗಜ ಸರ್ ಡಾನ್ ಬ್ರಾಡ್ಮನ್ 1931 ರಲ್ಲಿ 22 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ.

ಐ.ಪಿ.ಎಲ್.ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಸ್ ಗೇಲ್ 30 ಎಸೆತಗಳಲ್ಲಿ 100 ರನ್ ಗಳಿಸಿದ್ದಾರೆ. ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿ’ವಿಲಿಯರ್ಸ್ 31 ಎಸೆತಗಳಲ್ಲಿ ಶತಕ ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...