alex Certify
ಕನ್ನಡ ದುನಿಯಾ       Mobile App
       

Kannada Duniya

ಈಗಲಾದ್ರೂ ರವಿಶಾಸ್ತ್ರಿಗೆ ಬಂತಲ್ಲಾ ಬುದ್ಧಿ…!

ಇಂಗ್ಲೆಂಡ್ ಪ್ರವಾಸದಲ್ಲಿ ಹೀನಾಯ ಸೋಲು ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಅವರ ನಿದ್ದೆಗೆಡಿಸಿದೆ. ಸೋಲಿನಿಂದ ಟೀಕೆಗಳಿಗೆ ತುತ್ತಾಗಿದ್ದ ರವಿಶಾಸ್ತ್ರಿ, ಕಮ್ ಬ್ಯಾಕ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಏಕೈಕ ಅಭ್ಯಾಸ ಪಂದ್ಯಕ್ಕೆ ಇಲ್ಲ ಸಲ್ಲದ ಕಾರಣ ನೀಡಿದ್ದ ಟೀಂ ಇಂಡಿಯಾ ಹಾಗೂ ಕೋಚ್ ರವಿಶಾಸ್ತ್ರಿ ಇದೀಗ ಎಚ್ಚೆತ್ತುಕೊಂಡಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ಮೇಲೆ ದೃಷ್ಟಿ ನೆಟ್ಟಿರುವ ರವಿ ಶಾಸ್ತ್ರಿ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಭ್ಯಾಸ ಪಂದ್ಯ ಆಯೋಜಿಸಬೇಕು ಎಂದು ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾಗೆ ಮನವಿ ಮಾಡಿದ್ದರು. ಈ ಮೂಲಕ ತಮ್ಮ ತಪ್ಪನ್ನ ತಿದ್ದಿಕೊಳ್ಳಲು ಮುಂದಾಗಿದ್ದಾರೆ.

ಇನ್ನು ರವಿಶಾಸ್ತ್ರಿ ಅವರ ಮನವಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಗುಣಾತ್ಮಕ ಉತ್ತರ ನೀಡಿದ್ದು, ಬಿಸಿಸಿಐ ನಿಂದ ಪ್ರವಾಸದ ವೇಳಾ ಪಟ್ಟಿ ಬಂದ ನಂತರ ಅಭ್ಯಾಸ ಪಂದ್ಯದ ನಿರ್ಧಾರ ಕೈಗೊಳ್ಳೋದಾಗಿ ತಿಳಿಸಿದೆ.

ನವಂಬರ್ 21 ರಿಂದ ಜನವರಿ 18ರ ವರೆಗೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಬೀಡು ಬಿಡಲಿದೆ. ಈ ವೇಳೆ 3 ಟಿ-20, 4 ಏಕದಿನ ಹಾಗೂ 4 ಟೆಸ್ಟ್ ಪಂದ್ಯ ಆಡಲಿದೆ. ಸದ್ಯ ಟೀಮ್ ಇಂಡಿಯಾ ಏಷ್ಯಾ ಕಪ್ ನಲ್ಲಿ ಅದೃಷ್ಟ ಪರೀಕ್ಷೆ ನಡೆಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...