alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಕ್ರಿಕೆಟಿಗನ ವಿರುದ್ಧ ದೇಶದ್ರೋಹದ ದೂರು ದಾಖಲು 

ಮಾಜಿ ಕ್ರಿಕೆಟ್ ಆಟಗಾರ, ರಾಜಕಾರಣಿ ನವಜೋತ್ ಸಿಂಗ್ ಸಿಧು ವಿರುದ್ಧ ಬಿಹಾರ್ ಕೋರ್ಟ್ ನಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗಿದೆ.

ಪಾಕಿಸ್ತಾನದ 22ನೇ ಪ್ರಧಾನ ಮಂತ್ರಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕರಿಸಿದ್ರು. ಈ ಸಮಾರಂಭಕ್ಕೆ ಹಲವು ಮಾಜಿ ಕ್ರಿಕೆಟ್ ಆಟಗಾರರಿಗೆ ಆಹ್ವಾನ ನೀಡಲಾಗಿತ್ತು. ಮಾಜಿ ಕ್ರಿಕೆಟಿಗ  ನವಜೋತ್ ಸಿಂಗ್ ಸಿದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೆ ಈ ಸಮಾರಂಭದ ವೇಳೆ ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೆದ್ ಬಜ್ವಾರನ್ನು ತಬ್ಬಿಕೊಂಡಿದ್ದರು. ಈ ಅಪ್ಪುಗೆ ದೇಶವಾಸಿಗಳ ಕಣ್ಣು ಕೆಂಪಾಗಿಸಿದೆ.

ಬಿಹಾರದ ಮುಜಫರ್ ಪುರ್ ಕೋರ್ಟ್ ನಲ್ಲಿ, ವಕೀಲ ಸುಧೀರ್ ಕುಮಾರ್ ಓಝಾ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾ.ಹರಿಪ್ರಸಾದ ಅವರ ನೇತೃತ್ವದ ಪೀಠ ನಡೆಸಲಿದೆ. ಪ್ರಕರಣ ಆಗಸ್ಟ್ 24 ರಂದು ವಿಚಾರಣೆಗೆ ಒಳಪಡಲಿದೆ.

ಸಿದು ಪಾಕ್ ನಲ್ಲಿ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಿದ್ದರ ಬಗ್ಗೆಯೂ ದೂರುದಾರ ಪ್ರಶ್ನೆ ಎತ್ತಿದ್ದಾರೆ. ಪಾಕ್ ಸೈನಿಕರು ಗಡಿಯಲ್ಲಿ ನಮ್ಮ ಸೈನಿಕರ ಮೇಲೆ ಗುಂಡು ಹಾರಿಸುವ ಮೂಲಕ ಅವರ ಸಾವಿಗೆ ಕಾರಣರಾಗಿದ್ದಾರೆ. ಅಂತಹ ಸೇನೆಯ ಮುಖ್ಯಸ್ಥನನ್ನು ಆಲಿಂಗಿಸಿದ್ದು ಎಷ್ಟು ಸರಿ. ಇದು ದೇಶ ದ್ರೋಹ ಅಲ್ಲವೇ ಎಂದು ವಕೀಲರು ಪ್ರಶ್ನೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...