alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ನಲ್ಲಿ ಮಿಂಚಿದ ಪತಿ :ಕಾಮನ್ವೆಲ್ತ್ ನಲ್ಲಿ ನಿರಾಸೆ ಮೂಡಿಸಿದ ಪತ್ನಿ

ಒಂದು ಕಡೆ ಐಪಿಎಲ್ ಹಬ್ಬ ಶುರುವಾಗಿದೆ. ಇನ್ನೊಂದು ಕಡೆ ಕಾಮನ್ ವೆಲ್ತ್ ಗೇಮ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಕ್ರೀಡಾ ಪ್ರೇಮಿಗಳು ಎರಡೂ ಕಡೆ ಕಣ್ಣಿಟ್ಟಿದ್ದಾರೆ. ಭಾರತಕ್ಕೆ ಯಾವ ಸ್ಪರ್ಧೆಯಲ್ಲಿ ಯಾವ ಪದಕ ಬಂತು ಎಂಬುದರ ಜೊತೆಗೆ ಐಪಿಎಲ್ ನಲ್ಲಿ ಯಾರು ಗೆಲುವು ಸಾಧಿಸಿದ್ರು ಎಂಬುದನ್ನು ನೋಡ್ತಿದ್ದಾರೆ.

ಈ ಮಧ್ಯೆ ಐಪಿಎಲ್ ಹಾಗೂ ಕಾಮನ್ವೆಲ್ತ್ ನ ಜೋಡಿಯೊಂದು ಎಲ್ಲರ ಗಮನ ಸೆಳೆದಿದೆ. ಈ ಕ್ರೀಡಾ ಜೋಡಿಗೆ ಒಂದು ಕಡೆ ಖುಷಿಯಿದ್ರೆ ಇನ್ನೊಂದು ಕಡೆ ನೋವು. ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ಮಧ್ಯೆ ನಡೆದ ಪಂದ್ಯದಲ್ಲಿ ಕೆಕೆಆರ್ ಗೆದ್ದು ಬೀಗಿದೆ.

ಕೊಲ್ಕತ್ತಾ ಹೊಸ ನಾಯಕ ದಿನೇಶ್ ಕಾರ್ತಿಕ್ ನೇತೃತ್ವದ ತಂಡ ಕೊಹ್ಲಿ ಪಡೆಗೆ ಸೋಲಿನ ಕಹಿಯುಣಿಸಿದೆ. ಇದು ದಿನೇಶ್ ಕಾರ್ತಿಕ್ ಗೆ ಖುಷಿ ತಂದ ವಿಚಾರ. ಆದ್ರೆ ಅತ್ತ ಕಾಮನ್ ವೆಲ್ತ್ ಗೇಮ್ ನಲ್ಲಿ ಪತ್ನಿ ಸೋಲುಂಡಿದ್ದಾರೆ. ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಿಳ್ಳಿಕಲ್ ಸಿಂಗಲ್ಸ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

ಸ್ಕ್ವಾಶ್ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಸ್ಪರ್ಧೆಗಳು ಮಂಗಳವಾರದಿಂದ ಶುರುವಾಗಲಿವೆ. ಅದ್ರಲ್ಲಿ ದೀಪಿಕಾ ಪದಕ ತರ್ತಾರಾ ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...