alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮನ್ವೆಲ್ತ್ ಗೇಮ್ : ಸೀರೆ ಬದಲು ಹೊಸ ರೂಪದಲ್ಲಿ ಮಹಿಳಾ ಅಥ್ಲೆಟ್

ಆಸ್ಟ್ರೇಲಿಯಾದಲ್ಲಿ ನಡೆಯುವ ಕಾಮನ್ವೆಲ್ತ್ ಗೇಮ್ಸ್ 2018ರ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಮಹಿಳಾ ಆಟಗಾರ್ತಿಯರು ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏಪ್ರಿಲ್ ನಾಲ್ಕರಿಂದ ನಡೆಯುವ ಕಾಮನ್ವೆಲ್ತ್ ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಮಹಿಳಾ ಅಥ್ಲೆಟ್ ಗಳು ಸೀರೆ ಬದಲು ಪ್ಯಾಂಟ್ ಹಾಗೂ ಬ್ಲೇಜರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಭಾರತೀಯ ಒಲಂಪಿಕ್ ಅಸೋಸಿಯೇಷನ್ ಹೊಸ ಡ್ರೆಸ್ ಕೋಡ್ ಬಗ್ಗೆ ತೀರ್ಮಾನ ಕೈಗೊಂಡಿದೆ. ಮಹಿಳಾ ಕ್ರೀಡಾಪಟುಗಳು ಪುರುಷ ಕ್ರೀಡಾಪಟುಗಳಂತೆ ನೇವಿ ಬ್ಲ್ಯೂ ಬಣ್ಣದ ಪ್ಯಾಂಟ್ ಹಾಗೂ ಬ್ಲೇಜರ್ ಧರಿಸಲಿದ್ದಾರೆ. ಇದು ಆರಾಮ ನೀಡುವ ಉಡುಪು ಎಂದು ಐಒಎ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.

ಅನೇಕ ವರ್ಷಗಳಿಂದ ಮಹಿಳಾ ಕ್ರೀಡಾಪಟುಗಳು ಧರಿಸುತ್ತಿರುವ ಸೀರೆ ಆರಾಮದಾಯಕವಾಗಿಲ್ಲ. ಹಾಗಾಗಿ ನಾವು ಮಹಿಳಾ ಕ್ರೀಡಾಪಟುಗಳಿಗೂ ಪ್ಯಾಂಟ್ ಹಾಗೂ ಬ್ಲೇಜರ್ ನೀಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಶೂಟರ್ ಹೀನಾ ಸಿಧು ಖುಷಿ ವ್ಯಕ್ತಪಡಿಸಿದ್ದಾರೆ. ಸೀರೆಗಿಂತ ಪ್ಯಾಂಟ್ ಹಾಗೂ ಬ್ಲೇಜರ್ ಆರಾಮದಾಯಕ ಎಂದವರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...