alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮನ್ ವೆಲ್ತ್ ಗೇಮ್ಸ್: ವೇಟ್ ಲಿಫ್ಟಿಂಗ್ ನಲ್ಲಿ ಕಂಚು

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಎರಡನೇ ದಿನ ಒಂದು ಚಿನ್ನ ಹಾಗೂ ಒಂದು ಕಂಚು ಭಾರತದ ಪಾಲಾಗಿದೆ. ಪುರುಷರ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚು ಲಭಿಸಿದೆ.

ಪುರುಷರ 68 ಕೆ.ಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ದೀಪಕ್ ಲಾತೆರ್ ಕಂಚಿನ ಪದಕ ಗೆದ್ದಿದ್ದಾರೆ. ಹರ್ಯಾಣದ 18 ವರ್ಷದ ದೀಪಕ್ ಸ್ನ್ಯಾಚ್ ವಿಭಾಗದಲ್ಲಿ 136 ಕೆ.ಜಿ. ಹಾಗೂ ಕ್ಲೀನ್ ಎಂಡ್ ಜೆರ್ಕ್ ವಿಭಾಗದಲ್ಲಿ 159 ಕೆ.ಜಿ. ಭಾರ ಎತ್ತಿದ್ದಾರೆ. ಕೊನೆ ಪ್ರಯತ್ನದಲ್ಲಿ ದೀಪಕ್ 160 ಕೆ.ಜಿ. ಭಾರ ಎತ್ತುವ ಪ್ರಯತ್ನ ನಡೆಸಿದ್ರು. ಆದ್ರೆ ಯಶಸ್ಸು ಸಿಗಲಿಲ್ಲ. ದೀಪಕ್ ಒಟ್ಟು 295 ಕೆ.ಜಿ ಭಾರ ಎತ್ತಿ ಕಂಚನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತದ ಬಳಿ ಈಗ ಒಟ್ಟು ನಾಲ್ಕು ಪದಕವಿದೆ. ಎರಡು ಚಿನ್ನದ ಪದಕವಾದ್ರೆ ಒಂದು ಬೆಳ್ಳಿ ಹಾಗೂ ಇನ್ನೊಂದು ಕಂಚು. ವೇಟ್ ಲಿಫ್ಟಿಂಗ್ ನಲ್ಲಿಯೇ ಭಾರತ ನಾಲ್ಕು ಪದಕಗಳನ್ನು ಪಡೆದಿರುವುದು ವಿಶೇಷವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...